ಅಂಗವಿಕಲರು ಮತ್ತು ಹಿರಿಯ ನಾಗರೀಕರ ಸಬಲೀಕರಣ ನಿರ್ದೇಶನಾಲಯಕ್ಕೆ ಭೇಟಿ

02.02.24 03:54 AM By sewabharathikanyadi

ಅಂಗವಿಕಲರು ಮತ್ತು ಹಿರಿಯ ನಾಗರೀಕರ ಸಬಲೀಕರಣ ನಿರ್ದೇಶನಾಲಯದ ನಿರ್ದೇಶಕರು ಶ್ರೀ ಸಿದ್ದೇಶ್ವರ ಅವರನ್ನು ಅಕ್ಟೋಬರ್ 12 ರಂದು ಭೇಟಿ ಮಾಡಲಾಯಿತು. ಬೆನ್ನುಹುರಿ ಅಪಘಾತದ ಪರಿಣಾಮ, ಕಾರಣ ಹಾಗೂ ದ್ವಿತೀಯಾಂತರ ಸಮಸ್ಯೆಗಳನ್ನು ಪ್ರಸ್ತುತ ಪಡಿಸಿ, ಪುನಶ್ಚೇತನ ಕೇಂದ್ರದ ಅವಶ್ಯಕತೆಯ ಬಗ್ಗೆ ತಿಳಿಸಲಾಯಿತು. ಪ್ರತಿ ವಿಭಾಗಗಳಲ್ಲಿ ಪುನಶ್ಚೇತನ ಕೇಂದ್ರವನ್ನು ಪ್ರಾರಂಭಿಸುವಂತೆ ಮನವಿ ಮಾಡಲಾಯಿತು.

 ಈ ಸಂಧರ್ಭದಲ್ಲಿ ಶ್ರೀ ರವಿಶಂಕರ್, ಸೇವಾಭಾರತಿಯ ಖಜಾಂಚಿ ಶ್ರೀ ಕೆ ವಿನಾಯಕ ರಾವ್, ಚಿಕ್ಕಬಳ್ಳಾಪುರ ಎಸ್ ಸಿ ಐ ನವ ಜೀವನ ಸಂಘದ ಅಧ್ಯಕ್ಷರು ಶ್ರೀ ಮುನಿರಾಜು, ಸೇವಾಭಾರತಿಯ ಸೀನಿಯರ್ ಮ್ಯಾನೇಜರ್ ಶ್ರೀ ಚರಣ್ ಕುಮಾರ್ ಎಂ, ಹಿರಿಯ ಕ್ಷೇತ್ರ ಸಂಯೋಜಕರು ಶ್ರೀ ಮನು ಆರ್ ಉಪಸ್ಥಿತರಿದ್ದರು.

sewabharathikanyadi