ಕುಮಟಾದಲ್ಲಿ ಬೆನ್ನುಹುರಿ ಅಪಘಾತ ಕ್ಕೊಳಗಾದ ವ್ಯಕ್ತಿಗಳಿಗೆ 21ನೇ ಉಚಿತ ಆರೋಗ್ಯ ತಪಾಸಣೆ ಹಾಗೂ ಜಾಗೃತಿ ಶಿಬಿರ

31.01.24 01:13 PM By sewabharathikanyadi

ಕುಮಟಾ(ನ.22): ಸೇವಾಭಾರತಿ-ಸೇವಾಧಾಮ ಉತ್ತರ ಕನ್ನಡ ಜಿಲ್ಲೆ  ಆಶ್ರಯದಲ್ಲಿ ಕೆನರಾ ಹೆಲ್ತ್ ಸೆಂಟರ್ ಕುಮಟಾ ಇವರ ಸಹಯೋಗದಲ್ಲಿ ಬೆನ್ನುಹುರಿ ಅಪಘಾತಕ್ಕೊಳಗದವರಿಗಾಗಿ 21 ನೇ ಉಚಿತ ವೈದ್ಯಕೀಯ ಹಾಗೂ ಆರೋಗ್ಯ ತಪಾಸಣಾ ಶಿಬಿರದ ಉದ್ಘಾಟನಾ ಕಾರ್ಯಕ್ರಮವು ನವೆಂಬರ್ 22 ರಂದು ಕುಮಟಾದ ಕೆನರಾ ಹೆಲ್ತ್ ಸೆಂಟರ್ ನಲ್ಲಿ ನಡೆಯಿತು.

 ಕಾರ್ಯಕ್ರಮವನ್ನು ಕೆನರಾ ಹೆಲ್ತ್ ಸೆಂಟರ್ ಕುಮಟಾದ ಡಿ. ಜಿ.ಬಿ, ಡಿ. ಎನ್. ಬಿ ಅಧ್ಯಕ್ಷರು ಡಾ. ಜಿ. ಜಿ ಹೆಗ್ಡೆ ಕಾರ್ಯಕ್ರಮವನ್ನು ಉದ್ಘಾಟಿಸಿ, 'ಒಳಿತು ಕೆಡುಕು ಭಗವಂತನ ಇಚ್ಛೆ ಆದರೆ ಸಮಸ್ಯೆಯಲ್ಲಿ ಇರುವವರಿಗೆ ಧೈರ್ಯ ತುಂಬುವ ಕಾರ್ಯವನ್ನು ಸೇವಾಭಾರತಿ ಮಾಡುತ್ತಿದೆ' ಎಂದು ಉದ್ಘಾಟಕರ ನುಡಿಗಳನ್ನಾಡಿದರು. ಆರೋಗ್ಯ ಭಾರತಿಯ ರಾಷ್ಟ್ರೀಯ ಸಂಯೋಜಕ ಹಾಗೂ ಸ್ವಸ್ತ ಗ್ರಾಮ ಜವಾಬ್ದಾರಿಯ ಸದಾಶಿವ ಅವರು ಕಾರ್ಯಕ್ರಮ ವನ್ನುದ್ದೇಶಿಸಿ ಮಾತನಾಡಿದರು. ಲಯನ್ಸ್ ಕ್ಲಬ್ ನ ಅಧ್ಯಕ್ಷರು ಶ್ರೀ ದಾಮೋದರ ಭಟ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕುಮಟಾದ  ಉದ್ಯಮಿ ಶ್ರೀ ಸುಬ್ರಾಯ ವಾಲ್ಕೆ   ಸೇವಾಭಾರತಿ ಸಂಸ್ಥೆಯು ನಡೆಸುತ್ತಿರುವ ಸೇವೆಯ ಬಗ್ಗೆ ಪ್ರಶಂಸೆ ವ್ಯಕ್ತ ಪಡಿಸಿದರು. ಸೇವಾಭಾರತಿ ಖಜಾಂಚಿ ಶ್ರೀ ಕೆ ವಿನಾಯಕ ರಾವ್ ಅಧ್ಯಕ್ಷೀಯ ನುಡಿಗಳನ್ನಾಡಿದರು. ವೇದಿಕೆಯಲ್ಲಿ ಕಾರವಾರ ಸೇವಾಭಾರತಿ ಸಿರ್ಸಿ ವಿಭಾಗ್ ಪ್ರಮುಖ್ ಶ್ರೀ ಮೋಹನ್ ಗುಂಗಾ, ಡಾ. ಸಚ್ಚಿದಾನಂದ ನಾಯಕ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸೇವಾಭಾರತಿ ಸೀನಿಯರ್ ಮ್ಯಾನೇಜರ್ ಶ್ರೀ ಚರಣ್ ಕುಮಾರ್ ಎಂ.   ಕಾರ್ಯಕ್ರಮ ಸಂಯೋಜಕರು ಶ್ರೀ ಆಶ್ರಿತ್ ಸಿ ಪಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಕ್ಷೇತ್ರ ಸಂಯೋಜಕರಾದ ಶ್ರೀ ಶಶಾಂತ್ ಹಾಗೂ

ಮನು ಆರ್, ಸೇವಭಾರತಿಯ ಸ್ವಯಂ ಸೇವಕರಾದ ಶ್ರೀ ಪುರುಷೋತ್ತಮ್ ಉಪಸ್ಥಿತರಿದ್ದರು.

ಒಟ್ಟು 10 ಮಂದಿ ಬೆನ್ನುಹುರಿ ಅಪಘಾತ ಕ್ಕೊಳಗಾದ ದಿವ್ಯಾಂಗರು ಆರೋಗ್ಯ ತಪಾಸಣಾ ಶಿಬಿರದಲ್ಲಿ ಪಾಲ್ಗೊಂಡಿದ್ದರು. ಕಾರ್ಯಕ್ರಮವನ್ನು ಉಡುಪಿ ಜಿಲ್ಲೆಯ ಕ್ಷೇತ್ರ ಸಂಯೋಜಕರಾದ ಶಶಾಂತ್ ಸ್ವಾಗತಿಸಿ, ನಿರೂಪಿಸಿ ಧನ್ಯವಾದವಿತ್ತರು.


sewabharathikanyadi