ಬಡಕೋಡಿ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ಬಟ್ಟಲು ವಿತರಣೆ

12.02.24 11:43 AM By sewabharathikanyadi

ಬಡಕೋಡಿ (ಜ.19) : ರಾಮನಗರ ನವಚೇತನ ಚಾರಿಟೇಬಲ್ ಟ್ರಸ್ಟ್ ಫಾರ್ ಡಿಸೇಬಲ್ ನ ಸ್ಥಾಪಕಾಧ್ಯಕ್ಷರು ಶ್ರೀ ಮಂಜುನಾಥ್ ಕೆ ಎಸ್ ಇವರ ಸಹಕಾರದಲ್ಲಿ  ಬಡಕೋಡಿ ಸರಕಾರಿ ಶಾಲಾ ಮಕ್ಕಳಿಗೆ  ಉಚಿತವಾಗಿ ನೀಡಿದ ಊಟದ ಬಟ್ಟಲು ಗಳನ್ನು  ಸೇವಾಭಾರತಿ ಖಜಾಂಚಿ ಶ್ರೀ ಕೆ ವಿನಾಯಕ ರಾವ್  ವಿದ್ಯಾರ್ಥಿಗಳಿಗೆ ಜನವರಿ 19 ರಂದು ಹಸ್ತಾಂತರಿಸಿದರು.

ಕಾರ್ಯಕ್ರಮದಲ್ಲಿ ಸೇವಾಭಾರತಿ ಖಜಾಂಚಿ ಶ್ರೀ ಕೆ ವಿನಾಯಕ ರಾವ್ ಮಕ್ಕಳೊಂದಿಗೆ ಸಂವಾದ ನಡೆಸಿ, ತದನಂತರ ತಾವು ಬೆಳೆದು ಬಂದ ದಾರಿಯ ಸವಿ ನೆನಪುಗಳನ್ನು ಮಕ್ಕಳೊಂದಿಗೆ ಹಂಚಿ ಕೊಂಡರು. ವೇದಿಕೆಯಲ್ಲಿ  ಶಾಲಾ ಮಾಜಿ ಅಧ್ಯಕ್ಷರು ಶ್ರೀ ಶ್ರೀನಿವಾಸ್ ಉಪಾಧ್ಯಾಯ, ಗ್ರಾಮ ಸಮೃದ್ಧಿ ಸಹಕಾರದ ಅಧ್ಯಕ್ಷರು ಶ್ರೀಮತಿ ಶಶಿಕಲಾ, ಶ್ರೀ ಸುಧಾಕರ್ ನೂಯಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಸೇವಾಭಾರತಿ ಮ್ಯಾನೇಜರ್ ಶ್ರೀ ಮೋಹನ್ ಎಸ್, ಅಕೌಂಟೆಂಟ್ ಕು. ಅಕ್ಷತಾ, ಡಾಕ್ಯುಮೆಂಟೇಷನ್ ಸಂಯೋಜಕಿ ಕು. ಅಪೂರ್ವ ಪಿ. ವಿ ಹಾಗೂ ವಿದ್ಯಾರ್ಥಿಗಳ ಪೋಷಕರು ಉಪಸ್ಥಿತರಿದ್ದರು.

ಒಟ್ಟು 75 ಮಂದಿ ವಿದ್ಯಾರ್ಥಿಗಳಿಗೆ ಉಚಿತ ಊಟದ ಬಟ್ಟಲುಗಳನ್ನು ವಿತರಿಸಲಾಯಿತು.

sewabharathikanyadi