ಬೆನಕ ಆಸ್ಪತ್ರೆಯಲ್ಲಿ ಬ್ರಹತ್ ರಕ್ತ ದಾನ ಶಿಬಿರ

12.02.24 11:35 AM By sewabharathikanyadi

ಬೆನಕ ಹೆಲ್ತ್ ಸೆಂಟರ್, ಉಜಿರೆ ಇದರ ಆಶ್ರಯದಲ್ಲಿ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ, ಮಂಗಳೂರು, ಲೇಡಿಗೋಷನ್, ಮಂಗಳೂರು ಇವರ ಸಹಯೋಗದೊಂದಿಗೆ ಗಣರಾಜ್ಯೋತ್ಸವದ ಶುಭ ಸಂದರ್ಭದಲ್ಲಿ ಬೃಹತ್ ರಕ್ತ ದಾನ ಶಿಬಿರವು ಜನವರಿ 26 ರಂದು ಬೆನಕ ಆಸ್ಪತ್ರೆಯ ಸಭಾಂಗಣದಲ್ಲಿ ಜರುಗಿತು.

 ಶಿಬಿರವನ್ನು ರೋಟರಿ ಕ್ಲಬ್ ಬೆಳ್ತಂಗಡಿ ಯ ಅಧ್ಯಕ್ಷರಾದ ರೊ. ಅನಂತ ಭಟ್ ಮಚ್ಚಿಮಲೆ ಉದ್ಘಾಟಿಸಿ, ರಕ್ತ ದಾನ ಮಾಡುವುದರಿಂದ ಉಂಟಾಗುವ ಪ್ರಯೋಜನದ ಬಗ್ಗೆ ಮಾತನಾಡಿದರು. ಸೇವಾಭಾರತಿ ಕನ್ಯಾಡಿ ಅಧ್ಯಕ್ಷೆ ಶ್ರೀಮತಿ ಸ್ವರ್ಣಗೌರಿ, ಬೆಳ್ತಂಗಡಿ ತಾಲೂಕು ಔಷಧ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಶ್ರೀಧರ ಕೆ. ವಿ, ಉಜಿರೆ ಹವ್ಯಕ ವಲಯದ ಅಧ್ಯಕ್ಷ ಶ್ರೀ ಶ್ಯಾಮ್ ಭಟ್ ಅತ್ತಾಜೆ, ರೆಡ್ ಕ್ರಾಸ್ ಸೊಸೈಟಿ ಬೆಳ್ತಂಗಡಿಯ ಶಿವಕುಮಾರ್ ಮತ್ತು ಡಾ. ಭಾರತಿ ಜಿ ಕೆ ಶುಭಹಾರೈಸಿದರು.

 ಶಿಬಿರದಲ್ಲಿ  ಒಟ್ಟು 73 ಯೂನಿಟ್ಸ್ ರಕ್ತ ಸಂಗ್ರಹಿಸಲಾಯಿತು.

ಸೇವಾಭಾರತಿ (ರಿ.), ಕನ್ಯಾಡಿ ಇದರ ಶಿಬಿರ ಸಂಯೋಜನೆಯೊಂದಿಗೆ ಬೆಳ್ತಂಗಡಿ ತಾಲೂಕು ಔಷದಿ ವ್ಯಾಪಾರಸ್ಥರ ಸಂಘ, ರೋಟರಿ ಕ್ಲಬ್ ಬೆಳ್ತಂಗಡಿ, ಹವ್ಯಕ ವಲಯ ಉಜಿರೆ, ಇಂಡಿಯನ್ ರೆಡ್ ಕ್ರಾಸ್ ಸಂಸ್ಥೆ, ಬೆಳ್ತಂಗಡಿ ಶಿಬಿರದ ಯಶಸ್ಸಿಗೆ ಸಹಕರಿಸಿತು

sewabharathikanyadi