ಮೋಟಿವಷನ್ ಇಂಡಿಯಾ ಸಂಸ್ಥೆಗೆ ಭೇಟಿ

31.01.24 12:58 PM By sewabharathikanyadi

ಮೋಟಿವಷನ್ ಇಂಡಿಯಾ ಸಂಸ್ಥೆಯ ರಿಜಿನಲ್ ಮ್ಯಾನೇಜರ್ ಶ್ರೀ ಸುಧಾಕರ್ ಜಿ ಹಾಗೂ ಹೆಡ್ ಪಾರ್ಟ್ನರ್ ಹಾಗೂ ಬ್ಯುಸಿನೆಸ್ ಡೆವಲಪ್ಮೆಂಟ್ ಆಫೀಸರ್ ಶ್ರೀ ಪ್ರವೀಣ್ ಕುಮಾರ್ ಅವರನ್ನು ಅಕ್ಟೋಬರ್ 12 ರಂದು ಭೇಟಿ ಮಾಡಲಾಯಿತು. ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರಿಗೆ ಸೇವಾಭಾರತಿ ಸಂಸ್ಥೆಯ ಸಹಯೋಗದೊಂದಿಗೆ ಉತ್ತಮ ಸೇವೆಗಳನ್ನು ಒದಗಿಸಲು  ನಡೆಸಬಹುದಾದ ಚಟುವಟಿಕೆಗಳ ಕುರಿತು ಚರ್ಚಿಸಲಾಯಿತು.

 ಈ ಸಂಧರ್ಭದಲ್ಲಿ ಸೇವಾಭಾರತಿಯ ಖಜಾಂಚಿ ಶ್ರೀ ಕೆ ವಿನಾಯಕ ರಾವ್, ಚಿಕ್ಕಬಳ್ಳಾಪುರ ಎಸ್ ಸಿ ಐ ನವ ಜೀವನ ಸಂಘದ ಅಧ್ಯಕ್ಷರು ಶ್ರೀ ಮುನಿರಾಜು,ಸೇವಾಭಾರತಿಯ ಸೀನಿಯರ್ ಮ್ಯಾನೇಜರ್ ಶ್ರೀ ಚರಣ್ ಕುಮಾರ್ ಎಂ, ಹಿರಿಯ ಕ್ಷೇತ್ರ ಸಂಯೋಜಕರು ಶ್ರೀ ಮನು ಆರ್ ಉಪಸ್ಥಿತರಿದ್ದರು.

sewabharathikanyadi