ಶಿಬಿರದಲ್ಲಿ ಉಚಿತ ಸೆಲ್ಫ್ ಕೇರ್ ಕಿಟ್ ಹಾಗೂ ಮೆಡಿಕಲ್ ಕಿಟ್ ವಿತರಣೆ

12.02.24 11:47 AM By sewabharathikanyadi

ಶಿರಸಿ (ಜ.13) : ಸೇವಾಭಾರತಿ ಸೇವಾಧಾಮ, ಉತ್ತರ ಕನ್ನಡ ಜಿಲ್ಲೆ ಇದರ ಆಶ್ರಯದಲ್ಲಿ ಶಿರಸಿ ಸ್ಕ್ಯಾನ್ ಸೆಂಟರ್, ರೋಟರಿ ಕ್ಲಬ್, ಶಿರಸಿ ಹಾಗೂ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್, ಶಿರಸಿ ಇವುಗಳ ಸಹಯೋಗದಲ್ಲಿ ಬೆನ್ನುಹುರಿ ಅಪಘಾತಕ್ಕೊಳಗಾದವರಿಗಾಗಿ ನಡೆಸಿದ ವಸತಿಯುತ 22 ನೇ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ  ಫಲಾನುಭವಿಗಳಿಗೆ ಸಾಧನ ಸಲಕರಣೆಗಳು ಹಾಗೂ ಅಗತ್ಯವಿರುವ ಸೆಲ್ಫ್ ಕೇರ್ ಕಿಟ್ ಮತ್ತು ಮೆಡಿಕಲ್ ಕಿಟ್ ಗಳನ್ನು ಶಿರಸಿ ರೋಟರಿ ಕ್ಲಬ್ ನ ರೊ. ಮಹೇಶ್ ತೇಲಂಗ್ ರ ಪತ್ನಿ ಸೌಜನ್ಯ ತೇಲಂಗ್, ರೋಟರಿ ಕ್ಲಬ್ ನ ಅಧ್ಯಕ್ಷರು ರೊ. ಶ್ರೀಧರ್ ಹೆಗಡೆ, ಸೇವಾಭಾರತಿ ಸೀನಿಯರ್ ಮ್ಯಾನೇಜರ್ ಚರಣ್ ಕುಮಾರ್ ಎಂ. ಅವರಿಂದ ಹಸ್ತಾಂತರಿಸಲಾಯಿತು.

ಕಾರ್ಯಕ್ರಮದಲ್ಲಿ ಅರ್ಹ 4 ಮಂದಿ ಫಲಾನುಭವಿಗಳಿಗೆ  ಗಾಲಿಕುರ್ಚಿ, 1  ಮಂದಿ ಗೆ ಕಾಮೋಡೋ ಗಾಲಿಕುರ್ಚಿ, 6 ಮಂದಿ ದಿವ್ಯಾಂಗರಿಗೆ ಮೆಡಿಕಲ್ ಕಿಟ್, 5 ಮಂದಿಗೆ ಗಾಳಿ ಹಾಸಿಗೆ, 5 ಸೆಲ್ಫ್ ಕೇರ್ ಕಿಟ್ ಗಳನ್ನು ಹಸ್ತಾಂತರಿಸಲಾಯಿತು.

sewabharathikanyadi