ಶಿರಸಿ ಸ್ಕ್ಯಾನ್ ಸೆಂಟರ್ ನಲ್ಲಿ 22 ನೇ ವಸತಿಯುತ ಉಚಿತ ಆರೋಗ್ಯ ತಪಾಸಣಾ ಶಿಬಿರ

12.02.24 11:48 AM By sewabharathikanyadi

ಶಿರಸಿ (ಜ.11) : ಸೇವಾಭಾರತಿ ಸೇವಾಧಾಮ, ಉತ್ತರ ಕನ್ನಡ ಜಿಲ್ಲೆ ಇದರ ಆಶ್ರಯದಲ್ಲಿ ಶಿರಸಿ ಸ್ಕ್ಯಾನ್ ಸೆಂಟರ್, ರೋಟರಿ ಕ್ಲಬ್, ಶಿರಸಿ ಹಾಗೂ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್, ಶಿರಸಿ ಇವುಗಳ ಸಹಯೋಗದಲ್ಲಿ ಬೆನ್ನುಹುರಿ ಅಪಘಾತಕ್ಕೊಳಗಾದವರಿಗಾಗಿ ವಸತಿಯುತ 22 ನೇ ಉಚಿತ ಆರೋಗ್ಯ ತಪಾಸಣೆ ಹಾಗೂ ಗಾಲಿಕುರ್ಚಿ ಜಾಥಾ ಕಾರ್ಯಕ್ರಮದ ಉದ್ಘಾಟನಾ ಸಮಾರಂಭವು ಜನವರಿ 11 ರಂದು ಶಿರಸಿ ಸ್ಕ್ಯಾನ್ ಡೈಗ್ನೋಸ್ಟಿಕ್ ಮತ್ತು ರಿಸರ್ಚ್ ಸೆಂಟರ್ ನಲ್ಲಿ  ನಡೆಯಿತು. ಸೇವಾಭಾರತಿಯ ಸೀನಿಯರ್ ಮ್ಯಾನೇಜರ್ ಚರಣ್ ಕುಮಾರ್ ಎಂ ಸಂಸ್ಥೆಯ ಬಗ್ಗೆ ಪ್ರಸ್ತಾವಿಕ ನುಡಿಗಳನ್ನಾಡಿದರು.

 ಕಾರ್ಯಕ್ರಮವನ್ನು ಶಿರಸಿ ರೋಟರಿ ಕ್ಲಬ್ ಅಧ್ಯಕ್ಷರು ರೊ. ಶ್ರೀಧರ್ ಹೆಗಡೆ ಉದ್ಘಾಟಿಸಿ, ಸೇವಾಧಾಮವು ಬೆನ್ನುಹುರಿ ಅಪಘಾತಕ್ಕೊಳಗಾದವರಿಗೆ ಆಶಾಕಿರಣವಾಗಿದೆ ಎಂದು ಹೇಳುತ್ತಾ ಉದ್ಘಾಟಕರ ನುಡಿಗಳನ್ನಾಡಿದರು.

ಶಿರಸಿ ಸ್ಕ್ಯಾನ್ ಸೆಂಟರ್ ನ ಡಾ. ದಿನೇಶ್ ಹೆಗಡೆ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು. ಶಿರಸಿ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ನ ಅಧ್ಯಕ್ಷರು ಡಾ. ಮಧುಕೇಶ್ವರ ಜಿ. ವಿ ಫಲಾನುಭವಿಗಳಿಗೆ ಶುಭಹಾರೈಸಿದರು. ಶಿರಸಿ ರೋಟರಿ ಕ್ಲಬ್ ನ ರೊ. ಮಹೇಶ್ ತೇಲಂಗ್, ಶಿರಸಿಯ ಪೊಲೀಸ್ ಉಪನಿರೀಕ್ಷಕರು ಶ್ರೀ ನಾಗಪ್ಪ ಬಿ. ಹಿತನುಡಿಗಳನ್ನಾಡಿದರು. ಸೇವಾಭಾರತಿ ಖಜಾಂಚಿ ಹಾಗೂ ಸೇವಾಧಾಮದ ಸಂಸ್ಥಾಪಕರು ಶ್ರೀ ಕೆ ವಿನಾಯಕ ರಾವ್ ಅಧ್ಯಕ್ಷೀಯ ನುಡಿಗಳನ್ನಾಡಿದರು. ವೇದಿಕೆಯಲ್ಲಿ ಶಿರಸಿ ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರ ತರಬೇತುದಾರರಾದ ಶ್ರೀ ಕೃಷ್ಣ ಮಂಜುನಾಥ್ ಪೂಜಾರಿ, ಶಿರಸಿ ಸ್ಕ್ಯಾನ್ ಸೆಂಟರ್    ಯುರೋಲಾಜಿಸ್ಟ್  ಡಾ. ರೋಹಿತ್ ಹೆಗಡೆ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಸೇವಾಭಾರತಿ ಕಾರ್ಯಕ್ರಮ ಸಂಯೋಜಕರು ಶ್ರೀ ಆಶ್ರಿತ್ ಸಿ ಪಿ, ಹಿರಿಯ ಕ್ಷೇತ್ರ ಸಂಯೋಜಕರಾದ ಶ್ರೀ ಮನು ಆರ್, ಕ್ಷೇತ್ರ ಸಂಯೋಜಕರು ಶ್ರೀ ನಾಗಾರ್ಜುನ್, ಸೇವಾಧಾಮದ ಫಿಸಿಯೋತೆರಪಿಸ್ಟ್ ಶ್ರೀ ಗಣೇಶ್ ಕಾರ್ತಿಕ್ ಉಪಸ್ಥಿತರಿದ್ದರು.

ಒಟ್ಟು 09 ಮಂದಿ ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರು 3 ದಿನಗಳ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮವನ್ನು ಸೇವಾಭಾರತಿ ಕ್ಷೇತ್ರ ಸಂಯೋಜಕರು ಶ್ರೀ ಶಶಾಂತ್ ನಿರೂಪಿಸಿ, ಸ್ವಾಗತಿಸಿದರು. ಕಾರ್ಯಕ್ರಮ ಸಂಯೋಜಕರು ಶ್ರೀ ಆಶ್ರಿತ್ ಸಿ ಪಿ ಧನ್ಯವಾದವಿತ್ತರು.

sewabharathikanyadi