ಸೇವಾಧಾಮದಲ್ಲಿ ದೀಪಾವಳಿ ಸಂಭ್ರಮಾಚರಣೆ 

01.02.24 02:35 AM By sewabharathikanyadi

ಸೌತಡ್ಕ (ನ.13) : ಸೇವಾಭಾರತಿ- ಸೇವಾಧಾಮದ ವತಿಯಿಂದ ದೀಪಾವಳಿ ಹಬ್ಬದ ಸಂಭ್ರಮಾಚರಣೆಯು ಸೇವಾಧಾಮ ಪುನಶ್ಚೇತನ ಕೇಂದ್ರದಲ್ಲಿ ನವೆಂಬರ್ 13 ರಂದು ಸಂಜೆ 6 ಗಂಟೆಗೆ ಜರುಗಿತು.

 ದೀಪಾವಳಿ ಹಬ್ಬವನ್ನು ಸೇವಾಭಾರತಿ ಅಧ್ಯಕ್ಷೆ ಶ್ರೀಮತಿ ಸ್ವರ್ಣಗೌರಿ ಇವರು ಪ್ರಾರ್ಥನೆ ಹಾಗೂ ದೀಪ ಬೆಳಗಿಸಿವುದರ ಮೂಲಕ ಪ್ರಾರಂಭಿಸಲಾಯಿತು. ಸೌತಡ್ಕ ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್ ನ ಅಧ್ಯಕ್ಷರಾದ ಶ್ರೀ ಕೆ ಕೃಷ್ಣ ಭಟ್ ದೀಪಾವಳಿ ಹಬ್ಬದ ವಿಶೇಷತೆಯನ್ನು ತಿಳಿಸಿದರು. ಸೇವಾಧಾಮದ ಸಂಸ್ಥಾಪಕರಾದ ಶ್ರೀ ಕೆ ವಿನಾಯಕ ರಾವ್ ಸೇವಾಧಾಮದಲ್ಲಿ ದೀಪಾವಳಿ ಆಚರಣೆಯನ್ನು ಸಂಭ್ರಮಿಸುವ ಉದ್ದೇಶ ತಿಳಿಸಿದರು.ಕಾರ್ಯಕ್ರಮದಲ್ಲಿ ಸೇವಾಭಾರತಿ ಕಾರ್ಯದರ್ಶಿ ಶ್ರೀ ಬಾಲಕೃಷ್ಣ, ಸಲಹಾ ಮಂಡಳಿ ಸದಸ್ಯರು ಶ್ರೀ ರಜತ್ ರಾವ್, ಶ್ರೀ ರಾಮದಾಸ್ ಉಡುಪ ದಂಪತಿಗಳು ಉಪಸ್ಥಿತರಿದ್ದರು. 

 ಹಬ್ಬದ ಪ್ರಯುಕ್ತ ಸೇವಾಧಾಮದ ಸನಿವಾಸಿಗಳಿಗೆ ಉಡುಗೊರೆಯನ್ನು ನೀಡಲಾಯಿತು. ಕಾರ್ಯಕ್ರಮದ ನಂತರ ಮನೋರಂಜನಾ ಚಟುವಟಿಕೆಗಳನ್ನು ಹಾಗೂ ಮನೋರಂಜನಾ ಕಾರ್ಯಕ್ರಮಗಳನ್ನು  ಹಮ್ಮಿಕೊಳ್ಳಲಾಗಿತ್ತು.

 ಒಟ್ಟು 8 ಮಂದಿ ಸನಿವಾಸಿಗಳು, ಅವರ ಆರೈಕೆದಾರರು ಹಾಗೂ ಸೇವಾಭಾರತಿ ಸಿಬ್ಬಂದಿವರ್ಗ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದರು.

sewabharathikanyadi