ಸೇವಾಧಾಮ ಪುನಶ್ಚೇತನ ಕೇಂದ್ರದ 5 ನೇ ವಾರ್ಷಿಕೋತ್ಸವದ ಪ್ರಯುಕ್ತ ಬೃಹತ್ ರಕ್ತದಾನ ಶಿಬಿರ

01.02.24 02:45 AM By sewabharathikanyadi

ಸೇವಾಧಾಮ ಪುನಶ್ಚೇತನ ಕೇಂದ್ರದ 5 ನೇ ವಾರ್ಷಿಕೋತ್ಸವದ ಪ್ರಯುಕ್ತ ರೋಟರಿ ಸೇವಾಭಾರತಿ ಜೀವರಕ್ಷಕ್ ಯೋಜನೆ ಆಶ್ರಯದಲ್ಲಿ ಮಂಗಳೂರು ರಕ್ತ ನಿಧಿ ವಿಭಾಗದ ವೆನ್ಲಾಕ್ ಜಿಲ್ಲಾ ಸರಕಾರಿ ಆಸ್ಪತ್ರೆ ಸಹಕಾರದಲ್ಲಿ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಾಭಾಗಿತ್ವದಲ್ಲಿ ಬೃಹತ್ ರಕ್ತ ದಾನ ಶಿಬಿರವು ಡಿಸೆಂಬರ್ 03 ರಂದು ಸೇವಾಧಾಮ ಪುನಶ್ಚೇತನ ಕೇಂದ್ರದಲ್ಲಿ ಪೂರ್ವಹ್ನ 10.00 ಗಂಟೆಗೆ ಜರುಗಿತು.

ಕಾರ್ಯಕ್ರಮದಲ್ಲಿ ರೋಟರಿ ಸೇವಭಾರತಿಯ ಸಂಯೋಜಕರು ರೊ. ಶ್ರೀಧರ್ ಕೆ. ವಿ ಪ್ರಸ್ತಾವಿಕ ನುಡಿಗಳನ್ನಾಡಿದರು.ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರು ಶ್ರೀ ಎಂ ಹರೀಶ್ ರಾವ್ ಉದ್ಘಾಟಿಸಿ, ಉದ್ಘಾಟಕರನುಡಿಗಳನ್ನಾಡಿದರು.ಕೊಕ್ಕಡ ಆಡಳಿತ ವೈದ್ಯಾಧಿಕಾರಿಗಳು ಮತ್ತು ದಂತ ವೈದ್ಯಾಧಿಕಾರಿಗಳು ಡಾ. ತುಷಾರ ಕುಮಾರಿ ಸಂಸ್ಥೆಯು ತಮ್ಮ ಮಾತಿಗೆ ಒಪ್ಪಿ,  ನಡೆಸುತ್ತಿರುವ ರಕ್ತದಾನ ಶಿಬಿರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಸೇವಾಭಾರತಿ ಅಧ್ಯಕ್ಷೆ ಶ್ರೀಮತಿ ಸ್ವರ್ಣ ಗೌರಿ ಅಧ್ಯಕ್ಷೀಯ ನುಡಿಗಳನ್ನಾಡಿದರು.ವೇದಿಕೆಯಲ್ಲಿ ಉಜಿರೆ ಹವ್ಯಕ ವಲಯದ ಅಧ್ಯಕ್ಷರು ಶ್ರೀ ಶ್ಯಾಮ್ ಭಟ್ ಅತ್ತಾಜೆ, ಭಾರತೀಯ ಜೀವ ವಿಮಾ ನಿಗಮದ ಅಭಿವೃದ್ಧಿ ಅಧಿಕಾರಿ ಶ್ರೀ ಉದಯ ಶಂಕರ್, ಸೌತಡ್ಕ ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್ (ರಿ.) ಅಧ್ಯಕ್ಷರು ಶ್ರೀ ಕೆ ಕೃಷ್ಣ ಭಟ್, ಕೊಕ್ಕಡ ಶಿವಾಜಿ ಗ್ರೂಪ್ ಆಫ್ ಬಾಯ್ಸ್  ನ ಅಧ್ಯಕ್ಷರು ಶ್ರೀ ಕಿಶೋರ್, ಪಟ್ರಮೆ ವೀರ ಕೇಸರಿ ಅನಾರು ಅಧ್ಯಕ್ಷರು ಶ್ರೀ ಮೋಹನ್ ಗೌಡ ಅಶ್ವತ್ತಾಡಿ, ಕನ್ಯಾಡಿ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷರು ಶ್ರೀ ನವೀನ್ ಸುವರ್ಣ,ಕೊಕ್ಕಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರು ಶ್ರೀ ಕುಶಾಲಪ್ಪ ಗೌಡ ಉಪಸ್ಥಿತರಿದ್ದರು.

 ಒಟ್ಟು 81 ಯುನಿಟ್ ರಕ್ತ ಸಂಗ್ರಹಿಸಲಾಯಿತು. ಕಾರ್ಯಕ್ರಮವನ್ನು ಸೇವಾಭಾರತಿ ಕ್ಷೇತ್ರ ಸಂಯೋಜಕರು ಶ್ರೀ ಶಶಾಂತ್ ನಿರೂಪಿಸಿದರು. ರೋಟರಿ ಸೇವಾಭಾರತಿ ಸಂಯೋಜಕರು ರೊ. ಶ್ರೀಧರ್ ಕೆ. ವಿ ಸ್ವಾಗತಿಸಿ, ಸೇವಾಭಾರತಿ ಸೀನಿಯರ್ ಮ್ಯಾನೇಜರ್ ಚರಣ್ ಕುಮಾರ್ ಎಂ ಧನ್ಯವಾದವಿತ್ತರು.

 ವ್ಯವಸ್ಥಾಪನ ಸಮಿತಿ, ಶ್ರೀ ಮಹಾಗಣಪತಿ ದೇವಸ್ಥಾನ ಸೌತಡ್ಕ, ಉಪ್ಪಿನಂಗಡಿ ಹವ್ಯಕ ಮಂಡಲ, ಉಜಿರೆ ವಲಯ, ಶಿವಾಜಿ ಗ್ರೂಪ್ ಆಫ್ ಬಾಯ್ಸ್, ಕೊಕ್ಕಡ, ಸೌತಡ್ಕ ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್ (ರಿ.), ಕೊಕ್ಕಡ, ಕನ್ಯಾಡಿ ಫ್ರೆಂಡ್ಸ್ ಕ್ಲಬ್, ಕನ್ಯಾಡಿ, ವೀರಕೇಸರಿ ಅನಾರು ಪಟ್ರಮೆ, ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘ ಕೊಕ್ಕಡ, ಕೇಸರಿ ಗೆಳೆಯರ ಬಳಗ ಕೊಕ್ಕಡ, ಸಮುದಾಯ ಆರೋಗ್ಯ ಕೇಂದ್ರ ಕೊಕ್ಕಡ ಶಿಬಿರದ ಯಶಸ್ಸಿಗೆ ಸಹಕರಿಸಿತು.


sewabharathikanyadi