ಸೇವಾಭಾರತಿಯ 19 ನೇ ವರ್ಷದ ಸಂಭ್ರಮಾಚರಣೆ 

01.02.24 02:44 AM By sewabharathikanyadi

ಸೌತಡ್ಕ (ಡಿ.03): ಸೇವಾಭಾರತಿ ಸಂಸ್ಥೆಯ 19 ನೇ ವರ್ಷದ ಸಂಭ್ರಮ (2022-33) ಕೋಂಸ್ಕೋಪ್ ನಿಂದ ಕೇಂದ್ರ ಮತ್ತು ಸಮುದಾಯಕ್ಕೆ ಉಪಕರಣಗಳ ಹಸ್ತಾಂತರ ಮತ್ತು ವಿಶ್ವ ವಿಕಲಚೇತನರ ದಿನಾಚರಣೆಯ ಸಂಭ್ರಮಾಚರಣೆಯ ಕಾರ್ಯಕ್ರಮವನ್ನು ಡಿಸೆಂಬರ್ 03 ರಂದು ಸೇವಾಧಾಮ ಪುನಶ್ಚೇತನ ಕೇಂದ್ರದಲ್ಲಿ ನಡೆಸಲಾಯಿತು.

 ಕಾರ್ಯಕ್ರಮದಲ್ಲಿ ಸೇವಭಾರತಿಯ ಖಜಾಂಚಿ ಹಾಗೂ ಸೇವಾಧಾಮ ದ ಸಂಸ್ಥಾಪಕರಾದ ಶ್ರೀ ಕೆ ವಿನಾಯಕ ರಾವ್ ಪ್ರಸ್ತಾವಿಕ ನುಡಿಗಳನ್ನಾಡಿದರು. ಬೆಂಗಳೂರು ಕೋಂಸ್ಕೋಪ್ ಕಂಪನಿಯ ಸಾಫ್ಟ್ ವೇರ್ ಇಂಜಿನಿಯರ್ ವಿಭಾಗದ ನಿರ್ದೇಶಕರಾದ ಶ್ರೀ ವೀರೇಂದ್ರ ಸಿಂಗ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬೆಂಗಳೂರು ಕೋಂಸ್ಕೋಪ್ ಕಂಪನಿಯ ಟ್ರೇಡ್ ಕಂಪ್ಲೆಯನ್ಸ್ ವಿಭಾಗದ ಸೀನಿಯರ್ ಮ್ಯಾನೇಜರ್ ಶ್ರೀ ನವೀನ್ ವಜ್ರವೇಲು ಉದ್ಘಾಟಕರ ನುಡಿಗಳನ್ನಾಡಿದರು.

ಬೆಂಗಳೂರು ಕೋಂಸ್ಕೋಪ್ ಕಂಪನಿಯ ಸಾಫ್ಟ್ ವೇರ್ ಇಂಜಿನಿಯರ್ ವಿಭಾಗದ ಸೀನಿಯರ್ ಮ್ಯಾನೇಜರ್ ಶ್ರೀ ಮುರಳಿ ಜಯರಾಮನ್ ಸಂಸ್ಥೆಯ ಬಗ್ಗೆ ಶುಭನುಡಿಗಳನ್ನಾಡಿದರು.

ಕೋಂಸ್ಕೋಪ್ ಕಂಪನಿಯ ಬ್ಯುಸಿನೆಸ್ ಆಪರೇಷನ್ ವಿಭಾಗದ ಸೂಪರ್ ವೈಸರ್ ಶ್ರೀ ಚೇತನ್ ಕಾರೆ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.    ಸೇವಾಧಾಮದ ಸಂಚಾಲಕರು ಶ್ರೀ ಪುರಂದರ ರಾವ್ ಸಂಸ್ಥೆಯ ಬಗ್ಗೆ ಹಿತ ನುಡಿಗಳನ್ನಾಡಿದರು. ಸೇವಾಭಾರತಿ ಅಧ್ಯಕ್ಷೆ ಶ್ರೀಮತಿ ಸ್ವರ್ಣಗೌರಿ ಅಧ್ಯಕ್ಷೀಯ ನುಡಿಗಳನ್ನಾಡಿದರು.

 ಸೇವಾಭಾರತಿ ಕಾರ್ಯದರ್ಶಿ ಶ್ರೀ ಬಾಲಕೃಷ್ಣ 2022-23 ರ ವಾರ್ಷಿಕ ವರದಿಯಲ್ಲಿನ ಮುಖ್ಯಾಂಶಗಳನ್ನು ಸಂಕ್ಷಿಪ್ತವಾಗಿ ತಿಳಿಸಿ ವಾರ್ಷಿಕ ವರದಿಯನ್ನು ಬಿಡುಗಡೆ ಮಾಡಿದರು.

ಕೆನರಾ ಬ್ಯಾಂಕ್ ಕೊಕ್ಕಡ ಶಾಖೆಯ ಮ್ಯಾನೇಜರ್ ಶ್ರೀ ಅಂಕಿತ್ ಸಿಂಗ್, ಉಡುಪಿ ಧಾನ್ಯಲಕ್ಷ್ಮೀ ರೈಸ್ ಮಿಲ್ ಮಾಲೀಕರು ಶ್ರೀ ಮಧ್ವಮೂರ್ತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.  ಕೋಂಸ್ಕೋಪ್ ಕಂಪನಿಯ ಸಿ ಎಸ್ ಆರ್ ಯೋಜನೆಯಡಿ 

ಫಲಾನುಭವಿಗಳಿಗೆ 15 ಗಾಲಿಕುರ್ಚಿ,5 ಗಾಳಿ ಹಾಸಿಗೆ, 5 ನೀರಿನ ಹಾಸಿಗೆ, 6 ಕಾಮಡೋ ಗಾಲಿಕುರ್ಚಿ, 1 ನ್ಯುಯೊ ಬೋಲ್ಟ್ ವಿತ್ ಫ್ಲೈ, 25 ಮೆಡಿಕಲ್ ಕಿಟ್ ಹಾಗೂ 50 ಸೆಲ್ಫ್ ಕೇರ್ ಕಿಟ್ ಗಳನ್ನು ನೀಡಿದ್ದು, ಕಾರ್ಯಕ್ರಮದಲ್ಲಿ ಸಿ ಎಸ್ ಆರ್ ಯೋಜನೆಯಡಿ ನೀಡಿದ ಗಾಲಿಕುರ್ಚಿ, ಮೆಡಿಕಲ್ ಕಿಟ್ ಹಾಗೂ ಸೆಲ್ಫ್ ಕೇರ್ ಕಿಟ್ಗಳನ್ನು  ಫಲಾನುಭವಿಗಳಿಗೆ ಹಸ್ತಾಂತರಿಸಲಾಯಿತು

 ಕಾರ್ಯಕ್ರಮವನ್ನು ಸೇವಾಭಾರತಿ ಸೀನಿಯರ್ ಮ್ಯಾನೇಜರ್ ಶ್ರೀ ಚರಣ್ ಕುಮಾರ್ ಎಂ ಮತ್ತು ಡಾಕ್ಯುಮೆಂಟೇಷನ್ ಸಂಯೋಜಕಿ ಅಪೂರ್ವ ಪಿ ವಿ ನಿರೂಪಿಸಿದರು. ಸೇವಾಭಾರತಿ ಖಜಾಂಚಿ ಶ್ರೀ ಕೆ ವಿನಾಯಕ ರಾವ್ ಸ್ವಾಗತಿಸಿ, ಸೇವಾಭಾರತಿ ಸೀನಿಯರ್ ಮ್ಯಾನೇಜರ್ ಶ್ರೀ ಚರಣ್ ಕುಮಾರ್ ಎಂ ಧನ್ಯವಾದವಿತ್ತರು.

sewabharathikanyadi