ನೈಮಿಷ ಹೌಸ್ ಆಫ್ ಸ್ಪೈಸಸ್ ಸೌತಡ್ಕ, ಕೊಕ್ಕಡ ಗ್ರಾಮ, ಬೆಳ್ತಂಗಡಿ ತಾಲೂಕು ಇವರು ತಮ್ಮ ಉದ್ಯಮದ ಮೂರನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ದೀಪಾವಳಿ ಹಬ್ಬದ ಲಕ್ಷ್ಮಿ ಪೂಜೆಯ ಸಂದರ್ಭದಲ್ಲಿ ಸೇವಾಭಾರತಿ ಸಂಸ್ಥೆಯ ಬೆನ್ನುಹುರಿ ಅಪಘಾತಕ್ಕೊಳಗಾದವರಿಗಾಗಿ ನಡೆಸಲ್ಪಡುವ ಸೇವಾಧಾಮ ಪುನಶ್ಚೇತನ ಕೇಂದ್ರಕ್ಕೆ ರೂ.50,000 ದ ಚೆಕ್ಕನ್ನು ಮಾಲೀಕರಾದ ಶ್ರೀ ಬಾಲಕೃಷ್ಣರವರು ಶ್ರೀ ಕೆ.
ವಿನಾಯಕ ರಾವ್ ( ಅಧ್ಯಕ್ಷರು, ಸೇವಾಭಾರತಿ ) ಮತ್ತು ತಂಡಕ್ಕೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್ ಸೌತಡ್ಕ ಇದರ ಅಧ್ಯಕ್ಷರಾದ ಶ್ರೀ ಕೃಷ್ಣ ಭಟ್ ಹಿತ್ತಿಲು, ಕೊಕ್ಕಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಶ್ರೀ ಕುಶಾಲಪ್ಪ ಗೌಡ ಪೂವಾಜೆ, ಶ್ರೀ ಬಾಲಕೃಷ್ಣ ನೈಮಿಶ ಇವರ ಮನೆಯವರು ಹಾಗೂ ಬಂಧು ಮಿತ್ರರು ಉಪಸ್ಥಿತರಿದ್ದರು. ಸಮಾಜದಿಂದ ಪಡೆದುಕೊಂಡ ಆದಾಯದ ಭಾಗಶಃವನ್ನು ಪುನಃ ಸಾಮಾಜಿಕ ಕಾರ್ಯಗಳಿಗೆ ಕೊಡುವ ಕಾರ್ಯ ನಿಜಕ್ಕೂ ಪ್ರೇರಣೆ ಆಗಿದೆ.
