ಗಾಂಧಿ ಜಯಂತಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮ ದಿನಾಚರಣೆಯನ್ನು ಧರ್ಮಸ್ಥಳ ಎಸ್. ಡಿ .ಎಮ್ ಆಂಗ್ಲ ಮಾಧ್ಯಮ ಶಾಲಾ ವತಿಯಿಂದ ಸೌತಡ್ಕ ಪುನಶ್ಚೇತನ ಕೇಂದ್ರದಲ್ಲಿ ಆಚರಣೆ ಮಾಡಲಾಯಿತು. ಗಾಂಧೀಜಿ ಮತ್ತು ಲಾಲ್ ಬಹುದ್ದೂರ್ ಶಾಸ್ತ್ರಿ ಅವರ ಕುರಿತು ಮಾತನಾಡಿದರು. ಮಕ್ಕಳು ಹಾಡು ಮತ್ತು ನೃತ್ಯದೊಂದಿಗೆ ಎಲ್ಲರನ್ನು ಮನರಂಜಿಸಿದರು.
ಶಾಲಾ ಮಕ್ಕಳು ಅಧ್ಯಾಪಕ ವೃಂದ ಶಾಲಾ ಸಿಬ್ಬಂದಿಗಳು ಮಕ್ಕಳ ಪೋಷಕರು ಭಾಗವಹಿಸಿದ ಈ ಕಾರ್ಯಕ್ರಮದಲ್ಲಿ ಸೇವಾಧಾಮದ ಶನಿವಾಸಿಗಳಿಗೆ ಸೆಲ್ಫ್ ಕೇರ್ ಕಿಟ್ ಮತ್ತು ಹಣ್ಣು ಹಂಪಲುಗಳನ್ನು ವಿತರಿಸಿದರು. ಕಾರ್ಯಕ್ರಮದಲ್ಲಿ ಸೇವಾ ಭಾರತಿಯ ಟ್ರಸ್ಟಿ ಬಾಲಕೃಷ್ಣರವರು ಉಪಸ್ಥಿತರಿದ್ದರು. ಸೇವಾಧಾಮದ ಚಟುವಟಿಕೆಗಳನ್ನು ಶ್ಲಾಘಿಸಿ, ರೂ.2000 ವನ್ನು ಸೇವಾಕಾರ್ಯಗಳಿಗೆ ಹಸ್ತಾಂತರಿಸಿದರು.
