ಸೇವಾಭಾರತಿ- ಸೇವಾಧಾಮ, ಉಡುಪಿ ಜಿಲ್ಲೆ ಇದರ ಆಶ್ರಯದಲ್ಲಿ ಹೈಟೆಕ್ ಮೆಡಿಕೇರ್ ಆಸ್ಪತ್ರೆ, ಅಂಬಲಪಾಡಿ, ಉಡುಪಿ, ರೋಟರಿ ಕ್ಲಬ್ ಕಾಪು, ಅಮ್ಮ ರಿಲಿಜಿಯಸ್ ಮತ್ತು ಚಾರಿಟೇಬಲ್ ಟ್ರಸ್ಟ್ (ರಿ) ಕಾಪು ಮತ್ತು ದಿವ್ಯಾಂಗ ರಕ್ಷಣಾ ಸಮಿತಿ, ಕೊಡವೂರು ಇವುಗಳ ಸಹಯೋಗದಲ್ಲಿ ಬೆನ್ನುಹುರಿ ಅಪಘಾತಕ್ಕೊಳಗಾದವರಿಗಾಗಿ ವಸತಿಯುತ 16ನೇ ಉಚಿತ ಆರೋಗ್ಯ ತಪಾಸಣೆ ಹಾಗೂ ಜಾಗೃತಿ ಶಿಬಿರ ಮತ್ತು 6 ಗಾಲಿಕುರ್ಚಿಗಳ ವಿತರಣೆ ಕಾರ್ಯಕ್ರಮವು 19 ಮತ್ತು 20 ಅಕ್ಟೋಬರ್ 2022 ಪೂರ್ವಾಹ್ನ 9:30 ರಿಂದ ಹೈಟೆಕ್ ಮೆಡಿಕಲ್ ಆಸ್ಪತ್ರೆ, ಅಂಬಲಪಾಡಿ ಉಡುಪಿಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ಜೋನ್ 5 ರೋಟರಿ ಕ್ಲಬ್ ಸಹಾಯಕ ಗವರ್ನರ್ ಆಗಿರುವ ರೊ! ಡಾ. ಶಶಿಕಾಂತ ಕಾರಿಂಕ ಶಿಬಿರವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೇವಾ ಭಾರತೀಯ ಅಧ್ಯಕ್ಷರಾಗಿರುವ ಕೆ . ವಿನಾಯಕ ರಾವ್ ರವರು ವಹಿಸಿದ್ದರು. ಕಾರ್ಯಕ್ರಮದಲ್ಲಿ ಅಮ್ಮ ಚಾರಿಟೇಬಲ್ ಟ್ರಸ್ಟ್ (ರಿ) ಕಾಪು ಇದರ ಅಧ್ಯಕ್ಷರಾದ ಶ್ರೀ ಕೆ . ವಾಸುದೇವ ಶೆಟ್ಟಿ, ಕೊಡವೂರು ನಗರಸಭಾ ಸದಸ್ಯರು ಮತ್ತು ದಿವ್ಯಾಂಗ ರಕ್ಷಣಾ ಸಮಿತಿಯ ಸಂಚಾಲಕರಾಗಿರುವ ಶ್ರೀ ಕೆ. ವಿಜಯ ಕೊಡವೂರು , ಹೈಟೆಕ್ ಮೆಡಿಕೆರ್ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕರಾಗಿರುವ ಶ್ರೀಮತಿ ವಾಣಿ.ವಿ.ರಾವ್ ಹಾಗೂ ವೈದ್ಯಕೀಯ ನಿರ್ದೇಶಕರಾಗಿರುವ ಡಾ. ಟಿ.ಎಸ್ ರಾವ್ ಕಾಪು ರೋಟರಿ ಕ್ಲಬ್ ನ ಅಧ್ಯಕ್ಷರಾಗಿರುವ ರೊl ಕೆ. ಸದಾಶಿವ ಭಟ್, ಹೈಟೆಕ್ ಮೆಡಿಕೇರ್ ಆಸ್ಪತ್ರೆಯ ಸೀನಿಯರ್ ಆರ್ಥೋಪೆಡಿಕ್ ಸರ್ಜನ್ ಡಾ. ಉಮೇಶ್ ಪ್ರಭು, ಹಿಪ್ ಅಂಡ್ ಸ್ಪೈನಲ್ ಸೀನಿಯರ್ ಕನ್ಸಲ್ಟೆಂಟ್ ಎಸ್. ಪಿ. ಮೋಹಂತಿ, ಮಂಗಳೂರಿನ ಜ್ಯೋತಿ ಕೆ.ಎಂ.ಸಿ ಹಾಸ್ಪಿಟಲ್ ನ ಕನ್ಸಲ್ಟೆಂಟ್ ಸ್ಟೈನ್ ಸರ್ಜನ್ ಈಶ್ವರ ಕೀರ್ತಿ, ಹಿರಿಯಡ್ಕ ಉದ್ಯಮಿಗಳಾದ ಶ್ರೀ ಕೃಷ್ಣಪ್ರಸಾದ್ ಶೆಟ್ಟಿ, ಉಡುಪಿ ದೇವಾಡಿಗ ಸಂಘದ ಅಧ್ಯಕ್ಷರಾಗಿರುವ ಶ್ರೀ ಗಣೇಶ್ ದೇವಾಡಿಗ, ಮಣಿಪಾಲ್ ಕೆ. ಎಂ. ಸಿ ಆಸ್ಪತ್ರೆಯ ಡಾ. ಮೈತ್ರೆಯಿ ಉಪಸ್ಥಿತರಿದ್ದರು. ಮಂಜುಳಾ ವಿ. ಪ್ರಸಾದ್ ಹಾಗೂ ಯೋಗ ತರಬೇತಿದಾರರಾದ ರಮೇಶ್ ಸಾಲಿಯಾನ್ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದರು. ಶಿಬಿರದಲ್ಲಿ ಭಾಗವಹಿಸಿದ ಫಲಾನುಭವಿಗಳಿಗೆ ಯೋಗ, ಫಿಜಿಯೋಥೆರಪಿ, ರಕ್ತ ಪರೀಕ್ಷೆ,ಮೂತ್ರ ಪರೀಕ್ಷೆ, ರಕ್ತದೊತ್ತಡ ಪರೀಕ್ಷೆ, ಆಪ್ತ ಸಮಾಲೋಚನೆ, ನುರಿತ ತಜ್ಞರಿಂದ ಕನ್ಸಲ್ಟೇಶನ್ ಸೇವೆಗಳನ್ನು ಉಚಿತವಾಗಿ ಒದಗಿಸಲಾಯಿತು. 20, ಅಕ್ಟೋಬರ್, 2022 ಸಂಜೆ ನಾಲ್ಕು ಗಂಟೆಗೆ ಸರಿಯಾಗಿ ಸಮಾರೋಪ ಸಮಾರಂಭ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಗರಸಭಾ ಸದಸ್ಯರು ಮತ್ತು ಕೊಡು ಊರಿನ ದಿವ್ಯಾಂಗ ರಕ್ಷಣಾ ಸಮಿತಿಯ ಸಂಚಾಲಕರಾಗಿರುವ ಶ್ರೀ ಕೆ. ವಿಜಯ ಕೊಡವೂರು ಇವರು ವಹಿಸಿದ್ದರು. ಕಾರ್ಯಕ್ರಮದಲ್ಲಿ ಸೇವಾಭಾರತಿಯ ಸಲಹಾ ಮಂಡಳಿಯ ಸದಸ್ಯರಾಗಿರುವ ಶ್ರೀ ಸಿ ಎ. ಗುಜ್ಜಾಡಿ ಪ್ರಭಾಕರ್ ನರಸಿಂಹ ನಾಯಕ್, ಕಾರ್ಯದರ್ಶಿ ಶ್ರೀಮತಿ ಸ್ವರ್ಣ ಗೌರಿ, ಪಡುಬಿದ್ರಿ ಸಹಕಾರಿ ವ್ಯವಸಾಯಕ ಸೊಸೈಟಿಯ ಅಧ್ಯಕ್ಷರಾಗಿರುವ ಶ್ರೀ ಸುಧೀರ್ ಕುಮಾರ್, ಸೆಲ್ಕೋ ಸೋಲಾರ್ ಲೈಟ್ ಲಿಮಿಟೆಡ್ ನ ಡಿ.ಜಿ.ಎಂ ಶ್ರೀ ಗುರುಪ್ರಕಾಶ್ ಶೆಟ್ಟಿ, ಹೆಜಮಾಡಿ ಪಂಚಾಯತ್ ಸದಸ್ಯರಾಗಿರುವ ಶ್ರೀ ಪ್ರಾಣೇಶ್, ಸೇವಾ ಭಾರತಿಯ ಸಲಹಾ ಮಂಡಳಿಯ ಸದಸ್ಯರಾಗಿರುವ ಶ್ರೀ ವಿಷ್ಣುಪ್ರಸಾದ್ ತೆಂಕಿಲ್ಲಾಯ ಪಿ.ಡಬ್ಲ್ಯೂ.ಡಿ ಕಾಂಟ್ರಾಕ್ಟರ್ ಅಜಿತ್ ಕೊಡವೂರು, ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗ ಹಾಗೂ ದಿವ್ಯಾಂಗ ರಕ್ಷಣಾ ಸಮಿತಿಯ ಖಜಾಂಜಿ ಆಗಿರುವ ಜಯ ಪೂಜಾರಿ ಕಲ್ಮಾಡಿ, ಉಡುಪಿ ಸೇವಾಧಾಮದ ಸದಸ್ಯರಾಗಿರುವ ಸಂತೋಷ್ ಸುವರ್ಣ, ರಿಸರ್ಚ್ ಸ್ಕಾಲರ್ ಆಶಾಲತಾ, ಕಾಪು ರೋಟರಿ ಕ್ಲಬ್ ನ ಕಾರ್ಯದರ್ಶಿ ಆಗಿರುವ ವಿದ್ಯಾಧರ ಪುರಾಣಿಕ್ ಇವರು ಸೇವಾಭಾರತಿಯ ಎಲ್ಲಾ ಸಿಬ್ಬಂದಿಗಳು ಉಪಸ್ಥಿತರಿದ್ದರು.ಶಿಬಿರದಿಂದ ಒಟ್ಟು 11 ಜನ ಬೆನ್ನುಹುರಿ ಅಪಘಾತಕ್ಕೊಳಗಾದವರು ಫಲಾನುಭವ ಪಡೆದುಕೊಂಡರು.
