ಸೇವಾಭಾರತಿ ಕನ್ಯಾಡಿ. (ರಿ) ಸಂಸ್ಥೆಗೆ ರಾಜ್ಯ ಪ್ರಶಸ್ತಿ ಮಾನ್ಯರೇ, ಈ ವರ್ಷದ ವಿಶ್ವ ವಿಶೇಷಚೇತನರ ದಿನಾಚರಣೆ 2022ರ ಪ್ರಯುಕ್ತ ಕರ್ನಾಟಕ ರಾಜ್ಯ ಸರಕಾರದ ದಿವ್ಯಾಂಗ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ, ದಿವ್ಯಾಂಗ ಕ್ಷೇತ್ರದಲ್ಲಿ ಅತ್ತ್ಯುತ್ತಮ ಸೇವೆ ಸಲ್ಲಿಸಿರುವ ಸಂಸ್ಥೆಗೆ ಕೊಡಲ್ಪಡುವ ರಾಜ್ಯ ಸೇವಾ ಪ್ರಶಸ್ತಿಗೆ ನಮ್ಮ ಸೇವಾಭಾರತಿ ಕನ್ಯಾಡಿ. (ರಿ) ಆಯ್ಕೆಯಾಗಿರುವುದಾಗಿ ತಿಳಿಸಲು ಹರ್ಷಿಸುತ್ತಿದ್ದೇವೆ.
ಸೇವಾಭಾರತಿ ವಿಕಲಚೇತನ ಕ್ಷೇತ್ರದಲ್ಲಿ ಮಾಡಿದ ಸೇವೆ ಹಾಗೂ ಸಾಧನೆಗಳನ್ನು ಗುರುತಿಸಿ (03/12/2022) ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ವಿಶ್ವ ವಿಶೇಷಚೇತನ ದಿನಾಚರಣೆಯ ಸಂದರ್ಭದಲ್ಲಿ ರಾಜ್ಯದ ಮುಖ್ಯ ಮಂತ್ರಿಗಳಾದ ಶ್ರೀ ಬಸವರಾಜ್ ಬೊಮ್ಮಾಯಿವರು ಹಾಗು ದಿವ್ಯಾಂಗ ಇಲಾಖೆಯ ಸಚಿವರಾದ ಶ್ರೀ ಹಾಲಪ್ಪ ಆಚಾರ್ ಇವರ ಉಪಸ್ಥಿತಿಯಲ್ಲಿ ಈ ರಾಜ್ಯ ಪ್ರಶಸ್ತಿಯನ್ನು ಸೇವಾಭಾರತಿ ಕನ್ಯಾಡಿ. (ರಿ) ಸಂಸ್ಥೆಗೆ ನೀಡಿ ಇನ್ನೂ ಹೆಚ್ಚಿನ ಸಮಾಜಮುಖಿ ಸೇವಕಾರ್ಯಗಳನ್ನು ಮಾಡಲು ಪ್ರೇರೇಪಿಸಿದರು. ಈ ರಾಜ್ಯ ಪ್ರಶಸ್ತಿ ಲಭಿಸಲು ಕಾರಣೀಕರ್ತರಾದ ನಮ್ಮ ಸಂಸ್ಥೆಯ ದಾನಿಗಳು ಹಾಗೂ ಎಲ್ಲಾ ಕಾರ್ಯಕರ್ತರಿಗೆ ಅಭಿನಂದನೆಗಳು
