ಉಡುಪಿ ( ಜು.19): ಸೇವಾಭಾರತಿ -ಸೇವಾಧಾಮದ ವತಿಯಿಂದ ಉಡುಪಿ ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನಲ್ಲಿ ಬೆನ್ನುಹುರಿ ಅಪಘಾತದ ಬಗ್ಗೆ ವಿದ್ಯಾರ್ಥಿಗಳಿಗೆ ಕಾರ್ಯಾಗಾರವನ್ನು ಜುಲೈ 19 ರಂದು ಆಯೋಜಿಸಲಾಯಿತು.
ಸೇವಾಭಾರತಿಯ ಹಿರಿಯ ಕ್ಷೇತ್ರ ಸಂಯೋಜಕರಾದ ಮನು ಆರ್. ಇವರು ಬೆನ್ನುಹುರಿ ಅಪಘಾತಕ್ಕೆ ಕಾರಣಗಳು, ಅದರ ನಿರ್ವಹಣಾ ಕ್ರಮ ಹಾಗೂ ದ್ವಿತೀಯಾಂತರ ಸಮಸ್ಯೆಯ ಬಗ್ಗೆ ಮಾಹಿತಿ ನೀಡಿದರು . ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರದ ಶ್ರೀ ರಾಘುನಾಥ್, ಕಾಲೇಜಿನ ನಿರ್ದೇಶಕಿ ಶ್ರೀಮತಿ ನಿರ್ಮಲಾ ಕುಮಾರಿ, ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜಕರು ಶ್ರೀ ನವೀನ್ ಚಂದ್ರ, ಶ್ರೀ ರೋಹಿತ್ ಅಮೀನ್,ಶ್ರೀ ಹರೀಶ್ ರವೀಂದ್ರ, ರೆಡ್ ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ಶ್ರೀ ಶೈಲೇಶ್, ಶ್ರೀಮತಿ ಶ್ರುತಿ, ಸೇವಾಭಾರತಿಯ ಕ್ಷೇತ್ರ ಸಂಯೋಜಕರು ಶ್ರೀ ಶಶಾಂತ್ ಉಪಸ್ಥಿತರಿದ್ದರು.
