ಉಡುಪಿ ( ಜು.20): ಸೇವಾಭಾರತಿ -ಸೇವಾಧಾಮದ ವತಿಯಿಂದ ಉಡುಪಿ ಕಲ್ಯಾಣಪುರ ಮಿಲಾಗ್ರಿಸ್ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರವನ್ನು ಜುಲೈ 20 ರಂದು ಆಯೋಜಿಸಲಾಯಿತು.
ಸೇವಾಭಾರತಿಯ ಹಿರಿಯ ಕ್ಷೇತ್ರ ಸಂಯೋಜಕರಾದ ಮನು ಆರ್. ಇವರು ಬೆನ್ನುಹುರಿ ಅಪಘಾತ, ಅದರ ನಿರ್ವಹಣಾ ಕ್ರಮ ಹಾಗೂ ದ್ವಿತೀಯಾಂತರ ಸಮಸ್ಯೆಯ ಬಗ್ಗೆ ಮಾಹಿತಿ ನೀಡಿದರು.ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಸವಿತಾ ಕುಮಾರಿ, ವಿಜ್ಞಾನ ಮತ್ತು ಇಕೋ ಕ್ಲಬ್ ನ ಸಂಯೋಜಕಿ ಶ್ರೀಮತಿ ಪ್ರೀತಿ, ಕಾಲೇಜಿನ ಅಧ್ಯಾಪಕರಾದ ಶ್ರೀಮತಿ ದೀಪ, ಶ್ರೀ ಅಖಿಲ್, ಶ್ರೀ ಲೊಯಸ್ಟನ್, ಶ್ರೀಮತಿ ಲೋಯ್ಲಿಸ್, ಶ್ರೀಮತಿ ಲೋಯ್ಲಿಟಾ, ಶ್ರೀಮತಿ ರುಬೇಕಾ, ಸೇವಾಭಾರತಿಯ ಕ್ಷೇತ್ರ ಸಂಯೋಜಕರು ಶ್ರೀ ಶಶಾಂತ್ ಉಪಸ್ಥಿತರಿದ್ದರು.
ಒಟ್ಟು 180 ಮಂದಿ ವಿದ್ಯಾರ್ಥಿಗಳು ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿದದ್ದರು. ನೋಹ ಸಲ್ದಾನ ಕಾರ್ಯಕ್ರಮಕ್ಕೆ ಧನ್ಯವಾದವಿತ್ತರು.
