ಉಡುಪಿಯ ಭಾರತ್ ವಿಕಾಸ್ ಪರಿಷದ್ ನಲ್ಲಿ ಬೆನ್ನುಹುರಿ ಅಪಘಾತ ಮಾಹಿತಿ ಕಾರ್ಯಾಗಾರ

15.11.23 03:05 PM By sewabharathikanyadi

ಉಡುಪಿ( ಜೂ.24): ಸೇವಾಭಾರತಿ - ಸೇವಾಧಾಮದ ವತಿಯಿಂದ  ಭಾರ್ಗವ ಶಾಖೆ ಉಡುಪಿಯ ಭಾರತ್ ವಿಕಾಸ್ ಪರಿಷದ್ ನಲ್ಲಿ  ಕಾರ್ಯಾಗಾರವನ್ನು  ಜೂನ್ 24 ರಂದು ಆಯೋಜಿಸಲಾಯಿತು.

ಸೇವಾಭಾರತಿಯ ಖಜಾಂಚಿ  ಶ್ರೀ ಕೆ. ವಿನಾಯಕ ರಾವ್ ಇವರು  ಬೆನ್ನುಹುರಿ ಅಪಘಾತ  ಹಾಗೂ  ಬೆನ್ನುಹುರಿ ಅಪಘಾತ ತಡೆಯಲು ಮುನ್ನೆಚ್ಚರಿಕಾ ಕ್ರಮಗಳು  ಮತ್ತು ಬೆನ್ನುಹುರಿ ಅಪಘಾತ ದಿವ್ಯಾಂಗರಿಗೆ ಪುನಶ್ಚೇತನದ ಅಗತ್ಯತೆಯನ್ನು ಸಂಕ್ಷಿಪ್ತವಾಗಿ ತಿಳಿಸಿದರು. ಕಾರ್ಯಕ್ರಮದಲ್ಲಿ  ಉಡುಪಿ ಭಾರತ ವಿಕಾಸ್ ಪರಿಷದ್ ನ ಅಧ್ಯಕ್ಷರಾದ ಶ್ರೀ ಕೃಷ್ಣ ಪ್ರಸಾದ್,ಕಾರ್ಯದರ್ಶಿ  ಶ್ರೀ ಕೆ.ಸುಬ್ರಾಯ ಶೆಣೈ, ಸಂಚಾಲಕರು ಶ್ರೀ ಪಿ. ವಸಂತ ಭಟ್,ಸೇವಾಭಾರತಿಯ ಟ್ರಸ್ಟಿ ಶ್ರೀ ವಿಷ್ಣು ಪ್ರಸಾದ್ ತೆಂಕಿಲ್ಲಾಯ, ಸೇವಾಭಾರತಿಯ ಸೀನಿಯರ್ ಮ್ಯಾನೇಜರ್ ಶ್ರೀ  ಚರಣ್ ಕುಮಾರ್ ಎಂ, ಉಡುಪಿ ಕ್ಷೇತ್ರ ಸಂಯೋಜಕರಾದ ಶ್ರೀ ಶಶಾಂತ್  ಉಪಸ್ಥಿತರಿದ್ದರು.

ಒಟ್ಟು ಭಾರತ್ ವಿಕಾಸ್ ಪರಿಷದ್ ನ 30 ಮಂದಿ ಸದಸ್ಯರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು

sewabharathikanyadi