ಕನ್ಯಾಡಿ(ಜೂ.21): ಸೇವಾಭಾರತಿ(ರಿ.),ಕನ್ಯಾಡಿ ಹಾಗೂ ಶ್ರೀ ದುರ್ಗಾ ಮಾತೃ ಮಂಡಳಿ ಕನ್ಯಾಡಿ ಇವುಗಳ ಸಹಯೋಗದಲ್ಲಿ 25 ನೇ ಉಚಿತ ಟೈಲರಿಂಗ್ ತರಬೇತಿ ಮತ್ತು ಉಚಿತ ಯೋಗ ತರಬೇತಿ ಶಿಬಿರದ ಉದ್ಘಾಟನಾ ಕಾರ್ಯಕ್ರಮವು ಜೂನ್ 21 ರಂದು ಸೇವಾಭಾರತಿಯ ಪ್ರಧಾನ ಕಚೇರಿ ಸೇವಾನಿಕೇತನ ಕನ್ಯಾಡಿಯಲ್ಲಿ ಜರುಗಿತು.
ಕಾರ್ಯಕ್ರಮವನ್ನು ಶ್ರೀ ದುರ್ಗಾ ಮಾತೃಮಂಡಳಿಯ ಅಧ್ಯಕ್ಷರಾದ ಶ್ರೀಮತಿ ಶಾಂತ ಪಿ ಶೆಟ್ಟಿ ಉದ್ಘಾಟಿಸಿ, ಮಹಿಳೆಯರ ಸ್ವ-ಉದ್ಯೋಗದ ಪ್ರಾಮುಖ್ಯತೆ, ತರಬೇತಿಯ ಸದುಪಯೋಗ ಹಾಗೂ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಟೈಲರಿಂಗ್ ತರಬೇತಿಯನ್ನು ನೀಡಲು 6 ಟೈಲರಿಂಗ್ ಮಷೀನ್ ಗಳ ಅವಶ್ಯಕತೆ ಇದೆ ಎಂದು ತಿಳಿಸಿದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಸೇವಾಭಾರತಿಯ ಖಜಾಂಚಿ ಶ್ರೀ ಕೆ ವಿನಾಯಕ ರಾವ್ ಕಾರ್ಯಕ್ರಮವನ್ನು ಉದ್ದೇಶಿಸಿ, ಸಂಸ್ಥೆಯು ಮಹಿಳಾ ಸಬಲೀಕರಣಕ್ಕಾಗಿ ನಿರಂತರ ಶ್ರಮಿಸುತ್ತಿದೆ. ಶಿಬಿರದ ಸದುಪಯೋಗವಾಗಲಿ ಎಂದು ಶುಭಹಾರೈಸಿದರು. ಟೈಲರಿಂಗ್ ತರಬೇತುದಾರರಾದ ಶ್ರೀಮತಿ ಸುಮತಿ ಟೈಲರಿಂಗ್ ಬಗ್ಗೆ ಮಾಹಿತಿಯನ್ನು ಅಭ್ಯರ್ಥಿಗಳಿಗೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸೇವಾಭಾರತಿ ಅಧ್ಯಕ್ಷರಾದ ಶ್ರೀಮತಿ ಸ್ವರ್ಣಗೌರಿ ಮಹಿಳಾ ಸಬಲೀಕರಣದ ಅಗತ್ಯತೆ, ಟೈಲರಿಂಗ್ ಉದ್ಯೋಗವಾಕಾಶ ಮತ್ತು ಯೋಗಾಭ್ಯಾಸದ ಪ್ರಯೋಜನಗಳನ್ನು ತಿಳಿಸಿದರು.
ಕಾರ್ಯಕ್ರಮದಲ್ಲಿ ಶ್ರೀ ದುರ್ಗಾ ಮಾತೃ ಮಂಡಳಿಯ ಕಾರ್ಯದರ್ಶಿ ಶ್ರೀಮತಿ ಪೂರ್ಣಿಮಾ, ಖಜಾಂಚಿ ಶ್ರೀಮತಿ ಬಬಿತ , ಸೇವಾಭಾರತಿಯ ಮಹಿಳಾ ಲೈಂಗಿಕ ಕಿರುಕುಳ ತಡೆಗಟ್ಟುವಿಕೆ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ವಸಂತಿ ಗೌಡ, ಶ್ರೀ ದುರ್ಗಾ ಮಾತೃ ಮಂಡಳಿಯ ಸದಸ್ಯರಾದ ಶ್ರೀಮತಿ ರವಿಜಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಒಟ್ಟು 30 ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಸೇವಾಭಾರತಿ ಯ ಅಕೌಂಟೆಂಟ್ ಕು. ಅಕ್ಷತಾ ನಿರೂಪಿಸಿ, ಶ್ರೀ ದುರ್ಗಾ ಮಾತೃ ಮಂಡಳಿ ಕಾರ್ಯದರ್ಶಿ ಶ್ರೀಮತಿ ಪೂರ್ಣಿಮಾ ಸ್ವಾಗತಿಸಿ, ಸೇವಾಭಾರತಿಯ ಡಾಕ್ಯುಮೆಂಟೇಷನ್ ಸಂಯೋಜಕಿ ಕು. ಅಪೂರ್ವ ಪಿ ವಿ ವಂದಿಸಿದರು.
