ಬೆಳ್ತಂಗಡಿ ( ಜೂ.09): ಸೇವಾಭಾರತಿ -ಸೇವಾಧಾಮದ ವತಿಯಿಂದ ಬೆಳ್ತಂಗಡಿಯ ಕಲ್ಪತರು, ಸ್ಕೂಲ್ ಆಫ್ ನರ್ಸಿಂಗ್ ಕಾಲೇಜಿನ ಜಿ.ಎನ್.ಎಂ. ವಿದ್ಯಾರ್ಥಿಗಳಿಗೆ ಕಾರ್ಯಾಗಾರವನ್ನು ಜೂನ್ 9 ರಂದು ಆಯೋಜಿಸಲಾಯಿತು.
ಸೇವಾಭಾರತಿಯ ಹಿರಿಯ ಕ್ಷೇತ್ರ ಸಂಯೋಜಕರಾದ ಮನು ಆರ್. ಇವರು ಬೆನ್ನುಹುರಿ ಅಪಘಾತ ಮತ್ತು ದ್ವಿತೀಯಾಂತರ ಸಮಸ್ಯೆಯ ಬಗ್ಗೆ ಮಾಹಿತಿ ನೀಡಿದರು . ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರು ಚಂದ್ರಿಕಾ ಹಾಗೂ ಅಧ್ಯಾಪಕ ವೃಂದ, ಸೇವಾಭಾರತಿಯ ಖಜಾಂಚಿ ಕೆ. ವಿನಾಯಕ ರಾವ್, ಕಾರ್ಯಕ್ರಮ ಸಂಯೋಜಕರಾದ ಆಶ್ರಿತ್ ಸಿ. ಪಿ. ಉಪಸ್ಥಿತರಿದ್ದರು.
ಒಟ್ಟು 77 ಮಂದಿ ವಿದ್ಯಾರ್ಥಿಗಳು ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿದದ್ದರು.
