ಕಲ್ಮಂಜ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ

15.11.23 03:20 AM By sewabharathikanyadi

ಕಲ್ಮಂಜ (ಆ.22): ಸೇವಾಭಾರತಿ ಖಜಾಂಚಿ ಶ್ರೀ ಕೆ ವಿನಾಯಕ ರಾವ್ ಅವರ ಸಹಕಾರದೊಂದಿಗೆ ರಾಮನಗರ ನವಚೇತನ ಚಾರಿಟೇಬಲ್ ಟ್ರಸ್ಟ್ ಫಾರ್ ಡಿಸೆಬಲ್ಸ್ ನ ಅಧ್ಯಕ್ಷರಾದ ಶ್ರೀ ಕೆ ಎಸ್ ಮಂಜುನಾಥ್ ಇವರು ಕಲ್ಮಂಜ ಸಿದ್ದ ಬೈಲು ಪರಾರಿ ಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕಗಳನ್ನು ಆಗಸ್ಟ್ 23 ರಂದು ನೀಡಲಾಯಿತು.

 ಈ ಸಂಧರ್ಭದಲ್ಲಿ ಎಸ್. ಡಿ. ಎಂ. ಸಿ. ಅಧ್ಯಕ್ಷರಾದ ದಿನೇಶ್ ಗೌಡ, ಸೇವ ಭಾರತಿ ಟ್ರಸ್ಟಿನ  ಸದಸ್ಯರಾದ  ಶ್ರೀನಿವಾಸ್ ರಾವ್ ಕಲ್ಮಂಜ, ರಾಜಶೇಖರ್ ಹೆಬ್ಬಾರ್ ಪರಾರಿ ಮನೆ, ಯುವ ಸಬಲೀಕರಣ  ಕ್ರೀಡಾ ಇಲಾಖೆ  ಬೆಳ್ತಂಗಡಿ  ಮೇಲ್ವಿಚಾರಕರಾದ  ಶಾಂತಪ್ಪ, ಮುಖ್ಯ ಶಿಕ್ಷಕರಾದ  ಧರ್ಣಮ್ಮ ಸಹ ಶಿಕ್ಷಕರಾದ  ಶ್ರೀಮತಿ ರಾಜಿ, ಶ್ರೀಮತಿ ಮಮತಾ, ಗೌರವ ಶಿಕ್ಷಕರಾದ  ಶ್ರೀಮತಿ ಜಯಶ್ರೀ  ಮತ್ತು ಶ್ರೀಮತಿ ಕವಿತಾ  ಎಸ್.ಡಿ.ಎಂ.ಸಿ. ಉಪಾಧ್ಯಕ್ಷರಾದ   ಶ್ರೀಮತಿ ವಿದ್ಯಾ ಹಾಗೂ ಸದಸ್ಯರಾದ   ಅಮಿತಾ,ದೇಜಮ್ಮ ಉಪಸ್ಥಿತರಿದ್ದರು.

sewabharathikanyadi