ಕೊಕ್ಕಡ (ಮೇ 28): ಉಪ್ಪಿನಂಗಡಿ ಹವ್ಯಕ ಮಂಡಲ ವಲಯದ ನೇತೃತ್ವದಲ್ಲಿ ಶ್ರೀ ರಾಮ ಸೇವಾ ಟ್ರಸ್ಟ್ (ರಿ.), ಕೊಕ್ಕಡ ಹಾಗೂ ರೋಟರಿ ಕ್ಯಾಂಪ್ಕೋ ಬ್ಲಡ್ ಸೆಂಟರ್ ಪುತ್ತೂರು ಇವರುಗಳ ಸಹಯೋಗದೊಂದಿಗೆ ರಕ್ತದಾನ ಶಿಬಿರವು ಮೇ 28 ರಂದು ಕೊಕ್ಕಡದ ಶ್ರೀ ರಾಮ ಸೇವಾ ಮಂದಿರದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಕೊಕ್ಕಡದ ಶ್ರೀ ಜನಾರ್ಧನ ಕೆ ಪಿ ಇವರು ಉದ್ಘಾಟಿಸಿದರು. ಕಾರ್ಯಕ್ರಮದ ಮುಖ್ಯ ಅತಿಥಿಗಳು ಪುತ್ತೂರು ರೋಟರಿ ಕ್ಯಾಂಪ್ಕೋ ಬ್ಲಡ್ ಸೆಂಟರ್ ನ ವೈದ್ಯಾಧಿಕಾರಿಳಾದ ಡಾ. ರಾಮಚಂದ್ರ ಭಟ್ ಇವರು ರಕ್ತದಾನದ ಮಹತ್ವ ಮತ್ತು ರಕ್ತ ದಾನ ಮಾಡುವ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಜಿರೆ ಹವ್ಯಕ ವಲಯದ ಉಪಾಧ್ಯಕ್ಷರಾದ ಶ್ರೀ ಶಿವರಾಮ ಭಟ್ ಹಿತ್ತಿಲು ವಹಿಸಿದ್ದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಸೇವಾಭಾರತಿ(ರಿ.)ಕನ್ಯಾಡಿಯ ಅಧ್ಯಕ್ಷೆಯಾದ ಶ್ರೀಮತಿ ಸ್ವರ್ಣಗೌರಿ , ಪೂವಾಜೆ ಶ್ರೀ ಕುಶಾಲಪ್ಪ ಗೌಡ, ಕೊಕ್ಕಡದ ಗ್ರಾಮ ಪಂಚಾಯತ್ ನ ಅಧ್ಯಕ್ಷರಾದ ಶ್ರೀ ಯೋಗೀಶ ಆಲಂಬಿಲ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸೇವಾಭಾರತಿಯ ಖಜಾಂಚಿ ಕೆ. ವಿನಾಯಕ ರಾವ್, ಬೆಳ್ತಂಗಡಿ ರೋಟರಿ ಕ್ಲಬ್ ನ ನಿಯೋಜಿತ ಅಧ್ಯಕ್ಷ ಅನಂತ ಭಟ್ ಮಚ್ಚಿಮಲೆ, ಸೇವಾಭಾರತಿಯ ಕಾರ್ಯದರ್ಶಿ ಬಾಲಕೃಷ್ಣ, ಪುರಂದರ ಕಾಂಚೋಡು ಉಪಸ್ಥಿತರಿದ್ದರು.
ಶಿಬಿರಲ್ಲಿ ಒಟ್ಟು 45 ಯೂನಿಟ್ಸ್ ರಕ್ತ ಸಂಗ್ರಹಿಸಲಾಯಿತು.ಕಾರ್ಯಕ್ರಮವನ್ನು ಉದಯಶಂಕರ್ ಕೆ ನಿರೂಪಿಸಿದರು.ಉಜಿರೆ ಹವ್ಯಕ ವಲಯದ ಉಪಾಧ್ಯಕ್ಷರಾದ ಶ್ರೀ ಶಿವರಾಮ ಭಟ್ ಹಿತ್ತಿಲು ಸ್ವಾಗತಿಸಿ ಬೆಳ್ತಂಗಡಿ ರೋಟರಿ ಕ್ಲಬ್ ನಿಯೋಜಿತ ಕಾರ್ಯದರ್ಶಿ ಶ್ರೀ ವಿದ್ಯಾಕುಮಾರ್ ಕಾಂಚೋಡು ವಂದಿಸಿದರು.
ಸೇವಾಭಾರತಿ(ರಿ.)ಕನ್ಯಾಡಿ ಇದರ ಶಿಬಿರ ಸಂಯೋಜನೆಯೊಂದಿಗೆ, ವಿಶ್ವ ಹಿಂದೂ ಪರಿಷತ್, ಕೊಕ್ಕಡ, ಶ್ರದ್ದಾ ಗೆಳೆಯರ ಬಳಗ, ಉಪ್ಪಾರಪಳಿಕೆ, ಮಹಾಗಣಪತಿ ಸೇವಾ ಟ್ರಸ್ಟ್ (ರಿ.), ಸೌತಡ್ಕ, ಕೊಕ್ಕಡ, ಶ್ರೀ ಶಂಕರ ವೇದ ವಿದ್ಯಾ ಗುರುಕುಲ, ದರ್ಬೆತಡ್ಕ, ಹಿಂದೂ ಜಾಗರಣಾ ವೇದಿಕೆ ಶಿವಾಜಿ ಗ್ರೂಪ್ ಬಾಯ್ಸ್, ಕೊಕ್ಕಡ ಘಟಕ, ರೋಟರಿ ಕ್ಲಬ್ ಬೆಳ್ತಂಗಡಿ, ಹಿಂದೂ ಆಟೋ ಚಾಲಕ ಮಾಲಕರ ಸಂಘ, ಕೊಕ್ಕಡ, ಕೊಕ್ಕಡ ಕೃಷಿಪತ್ತಿನ ಸಹಕಾರ ಸಂಘ (ನಿ.), ಕಿರಣ್ ಆಗ್ರೋಟೆಕ್ ಕೊಕ್ಕಡ ಮತ್ತು ಉಜಿರೆ, ವ್ಯವಸ್ಥಾಪನಾ ಸಮಿತಿ, ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನ ಇವರುಗಳು ಶಿಬಿರದ ಯಶಸ್ಸಿಗೆ ಸಹಕರಿಸಿದರು.
