ಕೋಡಿಯಾಲಬೈಲು (ಆ.22): ಬೆಳ್ತಂಗಡಿ ತಾಲೂಕಿನ ಕಡಿರುದ್ಯಾವರ ಗ್ರಾಮದ ಕೋಡಿಯಾಲಬೈಲು ಸರ್ಕಾರಿ ಶಾಲೆಯ ವಿಧ್ಯಾರ್ಥಿಗಳಿಗೆ ಸೇವಾಭಾರತಿ ಕನ್ಯಾಡಿ ಖಜಾಂಚಿ ಶ್ರೀ ಕೆ ವಿನಾಯಕ ರಾವ್ ಅವರ ಸಹಕಾರದೊಂದಿಗೆ ರಾಮನಗರ ನವಚೇತನ ಚಾರಿಟೇಬಲ್ ಟ್ರಸ್ಟ್ ಫಾರ್ ಡೀಸಬಲ್ ಶ್ರೀ ಮಂಜುನಾಥ್ ಕೆ. ಎಸ್ ಇವರು ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ಉಚಿತವಾಗಿ ವಿತರಿಸಿದರು.
ಈ ಸಂದರ್ಭದಲ್ಲಿ ನವಚೇತನ ಟ್ರಸ್ಟ್ ಫಾರ್ ಡಿಸೆಬಲ್ಸ್ ನ ಸಂಸ್ಥಾಪಕರಾದ ಮಂಜುನಾಥ. ಕೆ.ಎಸ್ ,ಸೇವಾಧಾಮದ ಸಂಸ್ಥಾಪಕರಾದ ಶ್ರೀ ವಿನಾಯಕ ರಾವ್ ಕನ್ಯಾಡಿ ,ಕೋಡಿಯಾಲಬೈಲು ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಪಿಲೋಮಿನಾ ಸಿ.ಜೆ ಮತ್ತು ಶ್ರೀ ದುರ್ಗಾ ಶಕ್ತಿ ಮಹಿಳಾ ಸಂಘದ ಪ್ರಮುಖರಾದ ಶ್ರೀಮತಿ ಸವಿತಾ ರವೀಂದ್ರ ಪೂಜಾರಿ ಅವರು ಉಪಸ್ಥಿತರಿದ್ದರು.
