ಉಡುಪಿ ( ಜು.19): ಸೇವಾಭಾರತಿ -ಸೇವಾಧಾಮದ ವತಿಯಿಂದ ತೆಂಕನಿಡಿಯೂರು ಸರಕಾರಿ ಕಾಲೇಜಿನಲ್ಲಿ ಬೆನ್ನುಹುರಿ ಅಪಘಾತದ ಬಗ್ಗೆ ವಿದ್ಯಾರ್ಥಿಗಳಿಗೆ ಕಾರ್ಯಾಗಾರವನ್ನು ಜುಲೈ 19 ರಂದು ಆಯೋಜಿಸಲಾಯಿತು.
ಸೇವಾಭಾರತಿಯ ಹಿರಿಯ ಕ್ಷೇತ್ರ ಸಂಯೋಜಕರಾದ ಮನು ಆರ್. ಇವರು ಬೆನ್ನುಹುರಿ ಅಪಘಾತಕ್ಕೆ ಕಾರಣಗಳು, ಅದರ ನಿರ್ವಹಣಾ ಕ್ರಮ ಹಾಗೂ ದ್ವಿತೀಯಾಂತರ ಸಮಸ್ಯೆಯ ಬಗ್ಗೆ ಮಾಹಿತಿ ನೀಡಿದರು . ಕಾರ್ಯಕ್ರಮದಲ್ಲಿ , ಕಾಲೇಜಿನ ಪ್ರಾಂಶುಪಾಲರಾದ ಶ್ರೀ ವಿಶ್ವನಾಥ್, ಸೇವಾಭಾರತಿ ಕ್ಷೇತ್ರ ಸಂಯೋಜಕರು ಶ್ರೀ ಶಶಾಂತ್ ಉಪಸ್ಥಿತರಿದ್ದರು.
ಒಟ್ಟು 56 ಮಂದಿ ವಿದ್ಯಾರ್ಥಿಗಳು ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ಕಾರ್ಯಕ್ರಮವನ್ನು ಶ್ರೀಮತಿ ರೀನಾ ಸ್ವಾಗತಿಸಿದರು
