ಪುಂಜಾಲಕಟ್ಟೆ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಬೆನ್ನುಹುರಿ ಅಪಘಾತ ಮಾಹಿತಿ ಕಾರ್ಯಾಗಾರ

15.11.23 03:06 PM By sewabharathikanyadi

ಬೆಳ್ತಂಗಡಿ :( ಜೂ.21)ರಂದು ಸೇವಾಭಾರತಿ -ಸೇವಾಧಾಮದ ವತಿಯಿಂದ  ಬೆಳ್ತಂಗಡಿಯ  ಪುಂಜಾಲಕಟ್ಟೆ  ಸರ್ಕಾರಿ  ಪ್ರಥಮ ದರ್ಜೆ ಕಾಲೇಜಿನ  ವಿದ್ಯಾರ್ಥಿಗಳಿಗೆ  ಕಾರ್ಯಾಗಾರವನ್ನು  ಜೂನ್ 21 ರಂದು ಆಯೋಜಿಸಲಾಯಿತು.

ಸೇವಾಭಾರತಿಯ ಖಜಾಂಚಿ  ಶ್ರೀ ಕೆ. ವಿನಾಯಕ ರಾವ್ ಇವರು  ಬೆನ್ನುಹುರಿ ಅಪಘಾತ ಮತ್ತು ದ್ವಿತೀಯಾಂತರ ಸಮಸ್ಯೆಗಳು ಹಾಗೂ  ಬೆನ್ನುಹುರಿ ಅಪಘಾತ ತಡೆಯಲು ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು .ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಟಿ. ಕೆ. ಶರತ್ ಕುಮಾರ್, ಆಂತರಿಕ ಗುಣಮಟ್ಟ ಭರವಸಾ ಕೋಶ ಸಂಚಾಲಕರು ಡಾ. ಲೋಕೇಶ್, ರೆಡ್ ಕ್ರಾಸ್ ಸಂಚಾಲಕರು ಪ್ರೊ. ಶೇಖರ್, ರೋವರ್ ಮತ್ತು  ರೆಂಜರ್ಸ್ ಸಂಚಾಲಕರು  ಪ್ರೊ.ಆಂಜನೇಯ ಎಂ.ಎನ್. ಸೇವಾಭಾರತಿಯ ಹಿರಿಯ ಕ್ಷೇತ್ರ ಸಂಯೋಜಕರಾದ ಮನು ಆರ್, ಉಡುಪಿ ಕ್ಷೇತ್ರ ಸಂಯೋಜಕರಾದ ಶಶಾಂತ್ ಉಪಸ್ಥಿತರಿದ್ದರು.

ಒಟ್ಟು 71 ಮಂದಿ  ವಿದ್ಯಾರ್ಥಿಗಳು ಜಾಗೃತಿ ಕಾರ್ಯಗಾರದಲ್ಲಿ  ಭಾಗವಹಿಸಿದದ್ದರು

sewabharathikanyadi