ಬೆನ್ನುಹುರಿ ಅಪಘಾತ ದಿನಾಚರಣೆಯ ಕಾರ್ಯಕ್ರಮವು ಸೆಪ್ಟೆಂಬರ್ 25 ರಂದು ಸಂಜೆ 4 ಗಂಟೆಗೆ ನಡೆಯಿತು. ಕಾರ್ಯಕ್ರಮದಲ್ಲಿ ಮಂಗಳೂರು ಅತ್ತಾವರ ಕೆ. ಎಂ. ಸಿ ಆಸ್ಪತ್ರೆಯ ಉಪ ವೈದ್ಯಕೀಯ ಅಧೀಕ್ಷರು ಡಾ. ದೀಪಕ್ ಮಡಿ, ಅಸೋಸಿಯೇಷನ್ ಆಫ್ ಪೀಪಲ್ ವಿತ್ ಡಿಸೆಬಿಲಿಟಿ, ಆರೋಗ್ಯ ಮತ್ತು ಪುನಶ್ಚೇತನದ ಮ್ಯಾನೇಜರ್ ಶ್ರೀ ಉಮೇಶ್ ಎಚ್.ಕೆ, ಕೆ. ಎಂ. ಸಿ ಅತ್ತಾವರದ ಅರ್ಥೊಪೆಡಿಕ್ಸ್ ಡಿಪಾರ್ಟ್ಮೆಂಟ್ ನ ವೈದ್ಯರಾದ ಡಾ.ವೈಶಾಕ್ ಭಟ್,ಕೊಕ್ಕಡ ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್ ನ ಅಧ್ಯಕ್ಷರು ಶ್ರೀ ಕೆ ಕೃಷ್ಣ ಭಟ್, ದ. ಕ. ಜಿಲ್ಲಾ ಕಾರ್ಯನಿರತ ಪತ್ರ ಕರ್ತರ ಸಂಘದ ಅಧ್ಯಕ್ಷರು ಶ್ರೀ ಶ್ರೀನಿವಾಸ್ ನಾಯಕ್, ಸೇವಾಧಾಮದ ಸಂಸ್ಥಾಪಕರು ಹಾಗೂ ಸೇವಾಭಾರತಿ ಖಜಾಂಚಿ ಶ್ರೀ ಕೆ. ವಿನಾಯಕ ರಾವ್, ಚಿಕ್ಕಬಳ್ಳಾಪುರ ಎಸ್. ಸಿ. ಐ ನವಜೀವನ ಸಂಘದ ಅಧ್ಯಕ್ಷರು ಶ್ರೀ ಮುನಿರಾಜು, ಸೇವಾಭಾರತಿ ಅಧಕ್ಷೆ ಶ್ರೀಮತಿ ಸ್ವರ್ಣ ಗೌರಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರಿಗಾಗಿ ಸೇವೆ ಸಲ್ಲಿಸಿದ ಫಸ್ಟ್ ನ್ಯೂರೊ ಆಸ್ಪತ್ರೆಯ ಶಸ್ತ್ರ ಚಿಕಿತ್ಸಕರಾದ ಡಾ. ರಂಜನ್ ಎಸ್. ಎಸ್ ಅವರನ್ನು ಸೇವಾ ಶ್ರೇಷ್ಠ ಎಂಬ ಪ್ರಶಸ್ತಿ ನೀಡುವುದರ ಮೂಲಕ ಗೌರವಿಸಲಾಯಿತು.
