ಬೆನ್ನುಹುರಿ ಅಪಘಾತಕ್ಕೊಳಗಾದವರ ಗಾಲಿಕುರ್ಚಿ ಜಾಥಾ

12.02.24 11:45 AM By sewabharathikanyadi

ಶಿರಸಿ (ಜ.13) : ಸೇವಾಭಾರತಿ ಸೇವಾಧಾಮ, ಉತ್ತರ ಕನ್ನಡ ಜಿಲ್ಲೆ ಇದರ ಆಶ್ರಯದಲ್ಲಿ ಶಿರಸಿ ಸ್ಕ್ಯಾನ್ ಸೆಂಟರ್, ರೋಟರಿ ಕ್ಲಬ್, ಶಿರಸಿ ಹಾಗೂ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್, ಶಿರಸಿ ಇವುಗಳ ಸಹಯೋಗದಲ್ಲಿ ಬೆನ್ನುಹುರಿ ಅಪಘಾತಕ್ಕೊಳಗಾದವರಿಗಾಗಿ ನಡೆಸಿದ ವಸತಿಯುತ 22 ನೇ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಜನವರಿ 13 ರಂದು ಜನ ಸಾಮಾನ್ಯರಿಗೆ ಬೆನ್ನುಹುರಿ ಅಪಘಾತದ ಬಗ್ಗೆ ಅರಿವು ಮೂಡಿಸಲು ಮತ್ತು ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರನ್ನು ಮುಖ್ಯವಾಹಿನಿಗೆ ತರುವ ಉದ್ದೇಶದಿಂದಾಗಿ ಗಾಲಿಕುರ್ಚಿ ಜಾಥಾ ವನ್ನು ಜನವರಿ 13 ರಂದು ನಡೆಸಲಾಯಿತು.

 ಗಾಲಿಕುರ್ಚಿ ಜಾಥಾ ಕಾರ್ಯಕ್ರಮಕ್ಕೆ ಶಿರಸಿ ತಾಲೂಕಿನ ಪೊಲೀಸ್ ಉಪಾಧೀಕ್ಷಕರು  ಶ್ರೀ ಕೆ ಎಲ್ ಗಣೇಶ್ ಚಾಲನೆ ನೀಡಿದರು.

ಜಾಥಾವನ್ನು  ಚರ್ಚ್ ರೋಡ್ ಮುಖಾಂತರ ಪ್ರಾರಂಭಿಸಿ ಪೋಸ್ಟ್ ಆಫೀಸ್ ಗೆ ತಲುಪಿ ತದ ನಂತರ ಸಿ ಪಿ ಬಜಾರ್ ನಿಂದ ಮರಳಿ ಶಿರಸಿ ಸ್ಕ್ಯಾನ್ ಸೆಂಟರ್ ವರೆಗೆ ನಡೆಸಲಾಯಿತು.

 ಒಟ್ಟು 14 ಮಂದಿ ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರೊಂದಿಗೆ, ಸೇವಾಭಾರತಿ ಖಜಾಂಚಿ ಶ್ರೀ ಕೆ ವಿನಾಯಕ ರಾವ್,  ಶಿರಸಿ ತಾಲೂಕಿನ ವಿ ಆರ್ ಡಬ್ಲ್ಯೂ, ಎಂ ಆರ್ ಡಬ್ಲ್ಯೂ,ಆಶಾಕಾರ್ಯ ಕರ್ತೆಯರು, ಆಸ್ಪತ್ರೆಯ ಸಿಬ್ಬಂದಿಗಳು ಹಾಗೂ ಶಾಲಾ ವಿದ್ಯಾರ್ಥಿಗಳು ಸೇರಿದಂತೆ 300 ಮಂದಿ ಜಾಥಾದಲ್ಲಿ ಭಾಗವಹಿಸಿದ್ದರು.

sewabharathikanyadi