ಬೆನ್ನುಹುರಿ ಅಪಘಾತದ ಬಗ್ಗೆ ಮಾಹಿತಿ ಕಾರ್ಯಗಾರ

15.11.23 03:11 PM By sewabharathikanyadi

ನೆಲ್ಯಾಡಿ  :ಸೇವಾಭಾರತಿ ಸೇವಾಧಾಮದ ವತಿಯಿಂದ ಬೆಥನಿ ಐ ಟಿ  ಐ  ಕಾಲೇಜಿನ ವಿದ್ಯಾರ್ಥಿಗಳಿಗೆ ಬೆನ್ನುಹುರಿ ಅಪಘಾತದ  ಬಗ್ಗೆ ಮಾಹಿತಿ ಕಾರ್ಯಗಾರವನ್ನು ಫೆಬ್ರವರಿ 27 ರಂದು ಆಯೋಜಿಸಲಾಯಿತು.

ಸೇವಾಭಾರತಿ ದಕ್ಷಿಣ ಕನ್ನಡ ಜಿಲ್ಲೆಯ ಹಿರಿಯ ಕ್ಷೇತ್ರ ಸoಯೋಜಕರಾದ  ಅಖಿಲೇಶ್ ಎ ಮತ್ತು ಪೀರ್ ಟ್ರೈನರ್ ಮೋಹನ ಕೆ  ಅವರು ಬೆನ್ನುಹುರಿ ಅಪಘಾತ ಮತ್ತು ನಿರ್ವಹಣಾ ಕ್ರಮದ ಬಗ್ಗೆ  ಮಾಹಿತಿಯಿತ್ತರು.

ಈ ಸಂಧರ್ಭದಲ್ಲಿ  ಬೆಥನಿ  ಐ ಟಿ ಐ ಕಾಲೇಜಿನ ಪ್ರಾಂಶುಪಾಲರಾದ ಟಿ ಪಿ ತೊಮಸ್, ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ನ ಅಧ್ಯಕ್ಷರಾದ ಆರ್ ವೆಂಕಟರಮಣ, ಜೆ ಸಿ ಐ ನೆಲ್ಯಾಡಿಯ ಅಧ್ಯಕ್ಷರಾದ ದಯಾಕರ್ ರೈ ಉಪಸ್ಥಿತರಿದ್ದರು.ಹಾಗೂ ಕಾಲೇಜಿನ ಅಧ್ಯಾಪಕ ವೃಂದ ಮಾಹಿತಿ ಕಾರ್ಯಾಗಾರಕ್ಕೆ ಸಹಕಾರ ನೀಡಿದರು.

ಒಟ್ಟು 160 ವಿದ್ಯಾರ್ಥಿಗಳು ಕಾರ್ಯಗಾರ ದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮವನ್ನು  ತರಬೇತಿ ಅಧಿಕಾರಿಯಾದ ಜೋನ್ ಟಿ ಎಸ್ ನಿರೂಪಿಸಿ ಸ್ವಾಗತ ಹಾಗೂ  ಧನ್ಯವಾದವಿತ್ತರು

sewabharathikanyadi