ಬೆನ್ನುಹುರಿ ಅಪಘಾತದ ಬಗ್ಗೆ ಮಾಹಿತಿ ಕಾರ್ಯಗಾರ

15.11.23 03:17 PM By sewabharathikanyadi

ಉಜಿರೆ: ಸೇವಾಭಾರತಿ-ಸೇವಾಧಾಮದ ವತಿಯಿಂದ ಎಸ್. ಡಿ. ಎಮ್. ಕಾಲೇಜು ಉಜಿರೆಯ ಸಮಾಜ ಕಾರ್ಯ ವಿಭಾಗದ ಪ್ರಥಮ ಹಾಗೂ ದ್ವೀತೀಯ ವರ್ಷದ ವಿದ್ಯಾರ್ಥಿಗಳಿಗೆ ಬೆನ್ನುಹುರಿ ಅಪಘಾತ ಮತ್ತು ದ್ವಿತೀಯಾಂತರ ಸಮಸ್ಯೆ ಗಳ ಬಗ್ಗೆ ಕಾರ್ಯಗಾರವನ್ನು ಫೆಬ್ರವರಿ20 ರಂದು ನಡೆಸಲಾಯಿತು.

ಸೇವಾಭಾರತಿ ಯ ಖಜಾಂಚಿಯಾದ  ಶ್ರೀ ಕೆ.ವಿನಾಯಕ ರಾವ್ ಅವರು ಬೆನ್ನುಹುರಿ ಅಪಘಾತ ಮತ್ತು ದ್ವಿತೀಯಾಂತರ ಸಮಸ್ಯೆಗಳ ಬಗ್ಗೆ  ಮಾಹಿತಿಯಿತ್ತರು 

ಈ ಸಂಧರ್ಭದಲ್ಲಿ  ಸಮಾಜ ಕಾರ್ಯ ವಿಭಾಗದ  ಮುಖ್ಯಸ್ಥರಾದ ಡಾ. ರವಿಶಂಕರ್ ಕೆ. ಆರ್,  ಸಹಾಯಕ ಪ್ರಧ್ಯಾಪಕರುಗಳಾದ ಡಾ. ಅತುಲ್ ಸೆಮಿತ್, ಡಾ. ಧನೇಶ್ವರಿ,  ಸ್ವಾತಿ ಬಿ  ಹಾಗೂ ಸೇವಾ ಭಾರತಿ ದಕ್ಷಿಣ ಕನ್ನಡ ಜಿಲ್ಲೆಯ ಕ್ಷೇತ್ರ ಸಂಯೋಜಕರಾದ  ಅಖಿಲೇಶ್ ಎ, ಡಾಕ್ಯುಮೆಂಟ್ ಸಂಯೋಜಕಿಯಾದ  ಅಪೂರ್ವ ಪಿ. ವಿ ಅವರು ಕಾರ್ಯಕ್ರಮದಲ್ಲಿ  ಉಪಸ್ಥಿತರಿದ್ದರು.

ಕಾರ್ಯಗಾರದಲ್ಲಿಒಟ್ಟು 81 ವಿದ್ಯಾರ್ಥಿಗಳು  ಭಾಗವಹಿಸಿದ್ದರು. ಕು.ಪ್ರತೀಕ್ಷಾ ಕಾರ್ಯಕ್ರಮದ ನಿರೂಪಸಿ, ವಿಶಾಲ್ ಸ್ವಾಗತಿಸಿ ಕು.ಶಬರಿ ಧನ್ಯವಾದವಿತ್ತರು.

sewabharathikanyadi