ರಾಜ್ಯ ಮಟ್ಟದ ರಿಹ್ಯಾಬ್ ಮೇಳದ ಸಮಾರೋಪ ಸಮಾರಂಭ

17.11.23 06:00 AM By sewabharathikanyadi

ರಾಜ್ಯ ಮಟ್ಟದ ರಿಹ್ಯಾಬ್ ಮೇಳದ ಸಮಾರೋಪ ಸಮಾರಂಭವು ಬೆಳಗ್ಗೆ 11 ಗಂಟೆಗೆ ಮೋತಿಮಹಲ್ ಕನ್ವೆಂಷನ್ ಹಾಲ್ ನಲ್ಲಿ ನಡೆಯಿತು.ಕರ್ನಾಟಕ ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮದ ನಿವೃತ್ತ ರಾಜ್ಯ ಆಯುಕ್ತರು ಶ್ರೀ ಕೆ ವಿ ರಾಜಣ್ಣ ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರಿಗೆ ಸರಕಾರದಿಂದ ದೊರೆಯುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.


ಬೈಂದೂರು ವಿಧಾನ ಸಭಾ ಕ್ಷೇತ್ರದ ಮಾನ್ಯಶಾಸಕರು ಶ್ರೀ ಗುರುರಾಜ್ ಗಂಟಿಹೊಳೆ ,ಕೆ. ಎಂ. ಸಿ ಆಸ್ಪತ್ರೆಯ ಡಿಪಾರ್ಟ್ಮೆಂಟ್ ಆಫ್ ಆರ್ಥೊಪೆಡಿಕ್ಸ್ ನ ಸಹ ಪ್ರಾಧ್ಯಾಪಕಾರದ ಡಾ. ಈಶ್ವರ್ ಕೀರ್ತಿ, ಅಸೋಸಿಯೇಷನ್ ಆಫ್ ಪೀಪಲ್ ವಿಥ್ ಡಿಸೈಬಿಲಿಟಿಯ ಉಪನಿರ್ದೇಶಕರಾದ ಶ್ರೀ ಎಸ್. ಬಾಬು ಖಾನ್, ಮಂಗಳೂರು ರಾಷ್ಟ್ರೀಯ ಸೇವಾಭಾರತಿಯ ಸಂಯೋಜಕರಾದ ಶ್ರೀ ನಾರಾಯಣ ಶೆಣೈ, ಸೇವಾಭಾರತಿ ಕಾರ್ಯದರ್ಶಿ ಶ್ರೀ ಬಾಲಕೃಷ್ಣ, ಮಾಗಡಿ ಕರ್ನಾಟಕ ರಾಜ್ಯ ಬೆನ್ನುಹುರಿ ಅಪಘಾತದ ಅಂಗವಿಕಲರ ಸಂಘ (ರಿ.) ನ ಅಧ್ಯಕ್ಷರಾದ ಶ್ರೀ ಮಂಜುನಾಥ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಒಟ್ಟು 168 ಮಂದಿ ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರು ಹಾಗೂ 80 ಮಂದಿ ಆರೈಕೆದಾರರು ಬೇರೆ ಬೇರೆ ಜಿಲ್ಲೆಗಳಿಂದ ಆಗಮಿಸಿ  ರಿಹ್ಯಾಬ್ ಮೇಳದಲ್ಲಿ ಭಾಗವಹಿಸಿದ್ದಾ ರೆಂಬುದು ಸಂತಸದ ವಿಷಯ

sewabharathikanyadi