ಪಟ್ಟೂರು: ರಾಮನಗರದ ನವಚೇತನ ಚಾರಿಟೇಬಲ್ ಟ್ರಸ್ಟ್ ನ ವತಿಯಿಂದ ಸೇವಾಭಾರತಿ ಕನ್ಯಾಡಿ (ರಿ.) ಸಹಯೋಗದೊಂದಿಗೆ ಪಟ್ಟೂರಿನ ಶ್ರೀರಾಮ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಗೆ ಉಚಿತ ಬರೆಯುವ ಪುಸ್ತಕಗಳನ್ನು ಆ.21ರಂದು ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಟ್ರಸ್ಟ್ ನ ಅಧ್ಯಕ್ಷರಾದ ಕೆ.ಎಸ್.ಮಂಜುನಾಥ್ ವಿದ್ಯಾರ್ಥಿಗಳಿಗೆ ನೆರವಾಗುವಂತಹ ಈ ಕಾರ್ಯದಲ್ಲಿ ನನಗೆ ಆತ್ಮ ತೃಪ್ತಿ ಇದೆ. ನಾವು ಮಾಡುವ ಕಾರ್ಯ ಇನ್ನೊಬ್ಬರಿಗೆ ಪ್ರೇರಣೆ ನೀಡುವಂತಿರಬೇಕು. ವಿದ್ಯಾರ್ಥಿಗಳು ಕಲಿತ ಶಾಲೆಯನ್ನು ಮತ್ತು ಕಲಿಸಿದ ಗುರುಗಳನ್ನು ಯಾವತ್ತು ಮರೆಯಬಾರದು. ಚಿರಕಾಲ ಅವರಿಗೆ ಋಣಿಯಾಗಿರಬೇಕು ಎಂದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಕನ್ಯಾಡಿಯ ಸೇವಾ ಭಾರತಿಯ
ಶಾಲಾ ಮುಖ್ಯ ಶಿಕ್ಷಕ ಚಂದ್ರಶೇಖರ ಶೇಟ್, ನವಚೇತನ ಚಾರಿಟೇಬಲ್ ಟ್ರಸ್ಟ್ ರಾಮನಗರ ಹಾಗೂ ಸೇವಾ ಭಾರತಿ ಕನ್ಯಾಡಿ (ರಿ.) ಸಂಸ್ಥೆಗಳಿಗೆ ಧನ್ಯವಾದ ಅರ್ಪಿಸಿದರು. ಶಾಲಾ ಶಿಕ್ಷಕಿಯವರು, ಸಿಬ್ಬಂದಿವರ್ಗದವರು ಸಹಕರಿಸಿದರು.
