ವಿಶ್ವ ಬೆನ್ನುಹುರಿ ಅಪಘಾತ ದಿನಾಚರಣೆ ಪ್ರಯುಕ್ತ ರಾಜ್ಯ ಮಟ್ಟದ ರಿಹ್ಯಾಬ್ ಮೇಳ -2023

17.11.23 06:57 AM By sewabharathikanyadi

ಸೇವಾಭಾರತಿ (ರಿ.), ಕನ್ಯಾಡಿ, ದಕ್ಷಿಣ ಕನ್ನಡ ಜಿಲ್ಲೆ ಇದರ ಆಶ್ರಯದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಕೆ. ಎಂ. ಸಿ ಆಸ್ಪತ್ರೆ ಮಂಗಳೂರು, ಜಿಲ್ಲಾ ವೆನ್ಲಾಕ್ ಆಸ್ಪತ್ರೆ ಮಂಗಳೂರು ಹಾಗೂ ಕೆನರಾ ಸ್ಪೈನ್ ಫೋರಮ್, ಮಂಗಳೂರು ಇವುಗಳ ಸಹಯೋಗದಲ್ಲಿ ವಿಶ್ವ ಬೆನ್ನುಹುರಿ ಅಪಘಾತ ದಿನಾಚರಣೆ ಪ್ರಯುಕ್ತ ರಾಜ್ಯ ಮಟ್ಟದ ರಿಹ್ಯಾಬ್ ಮೇಳ -2023 ಮಂಗಳೂರಿನ ಮೋತಿ ಮಹಲ್, ಕನ್ವೆಂಷನ್ ಹಾಲ್ ನಲ್ಲಿ ಸೆಪ್ಟೆಂಬರ್ 24,25 ಮತ್ತು ಸೆಪ್ಟೆಂಬರ್ 26 ರಂದು ನಡೆಯಿತು.

  ಸೆಪ್ಟೆಂಬರ್ 24 ರಂದು  ಒಟ್ಟು ಆಗಮಿಸಿದ 106 ಬೆನ್ನು ಹುರಿ ಅಪಘಾತಕ್ಕೊಳಗಾದ ದಿವ್ಯಾಂಗರಿಗೆ ವೈದ್ಯಕೀಯ ತಪಾಸಣೆಯು ಅತ್ತಾವರದ ಕೆ. ಎಂ. ಸಿ ಆಸ್ಪತ್ರೆ, ವೆನ್ಲಾಕ್ ಜಿಲ್ಲಾ ಆಸ್ಪತ್ರೆಯಲ್ಲಿ ನಡೆಯಿತು. ಅಪಾರ ಸಂಖ್ಯೆಯಲ್ಲಿ ದಿವ್ಯಾಂಗರು ಆಗಮಿಸಿದ ಕಾರಣ ಆಸ್ಪತ್ರೆಗಳಲ್ಲಿ ಬೆಡ್ ಗಳು ಖಾಲಿ ಇಲ್ಲದೆ ಸುಮಾರು 52 ಮಂದಿ ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರನ್ನು ಪೂಂಜಾ ಇಂಟರ್ನ್ಯಾಷನಲ್ ಹೋಟೆಲ್ ನಲ್ಲಿ  ವ್ಯವಸ್ಥೆ ಮಾಡಲಾಯಿತು. ವೈದ್ಯರು ಪೂಂಜಾ ಇಂಟರ್ನ್ಯಾಷನಲ್ ಹೋಟೆಲ್ ಗೆ ಭೇಟಿ ನೀಡಿ ವೈದ್ಯಕೀಯ ಸಲಹೆ ನೀಡಿದರು.ತದ ನಂತರ ಅವಶ್ಯಕತೆ ಇದ್ದ ದಿವ್ಯಾಂಗರಿಗೆ ವೈದ್ಯಕೀಯ ತಪಾಸಣೆಗಾಗಿ ಕೆ. ಎಂ. ಸಿ ಆಸ್ಪತ್ರೆಗೆ ಕಳುಹಿಸಲಾಯಿತು.


  ಬೆನ್ನುಹುರಿ ಅಪಘಾತ ದಿನಾಚರಣೆ ಪ್ರಯುಕ್ತ ನಡೆಸಿದ ರಾಜ್ಯ ಮಟ್ಟದ ರಿಹ್ಯಾಬ್ ಮೇಳದ ಉದ್ಘಾಟನಾ ಕಾರ್ಯಕ್ರಮವು ಸೆಪ್ಟೆಂಬರ್ 25 ರಂದು ನಡೆಯಿತು. ಸೇವಾಧಾಮದ ಸಂಸ್ಥಾಪಕರು ಹಾಗೂ ಸೇವಾಭಾರತಿ ಖಜಾಂಚಿಯವರಾದ ಶ್ರೀ ಕೆ ವಿನಾಯಕ ರಾವ್  ಪ್ರಾಸ್ತಾವಿಕ ನುಡಿಗಳನ್ನಾಡಿದರು ಕಾರ್ಯಕ್ರಮವನ್ನು ಕರ್ನಾಟಕ ಸರಕಾರದ ಮಾನ್ಯ ವಿಧಾನ ಪರಿಷತ್ ಸದಸ್ಯರಾದ ಶ್ರೀ ಕೆ ಪ್ರತಾಪ್ ಸಿಂಹ ನಾಯಕ್ ಕಾರ್ಯಕ್ರಮವನ್ನು ಉದ್ಘಾಟಿಸಿ, ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರಿಗೆ ಸರಕಾದಿಂದ ಸೌಲಭ್ಯ ದೊರಕಿಸಲು ಸಹಾಯ ಮಾಡುವುದಾಗಿ ತಿಳಿಸಿದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಶ್ರೀ ವೇದವ್ಯಾಸ ಕಾಮತ್ ಮುಂದಿನ ದಿನಗಳಲ್ಲಿ ಬೆಂಬಲ ನೀಡುವುದಾಗಿ ಭರವಸೆ ನೀಡಿದರು. ವೇದಿಕೆಯಲ್ಲಿ ಮಾಹೆ ಮಂಗಳೂರು ಕ್ಯಾಂಪಸ್ ನ ಪ್ರೊ -ಉಪಕುಲಪತಿ ಡಾ. ದಿಲೀಪ್ ಜಿ ನಾಯ್ಕ್, ಕೆ. ಎಂ. ಸಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರು ಡಾ.ಜಾನ್ ರಾಮ ಪುರಂ, ಅಸೋಸಿಯೇಷನ್ ಆಫ್ ಪೀಪಲ್ ವಿಥ್  ಡಿಸೆಬಿಲಿಟಿಯ ಆರೋಗ್ಯ ಮತ್ತು ಪುನಶ್ಚೇತನದ ನಿರ್ದೇಶಕರು ಶ್ರೀ ನಿಶಾದ್ ಕಾಸಿಮ್, ಸೇವಾಭಾರತಿ ಅಧ್ಯಕ್ಷೆ ಶ್ರೀಮತಿ ಸ್ವರ್ಣಗೌರಿ, ಸೇವಾಧಾಮದ ಸಂಚಾಲಕರು ಶ್ರೀ ಕೆ ಪುರಂದರ ರಾವ್, ಉಡುಪಿ ಜಿಲ್ಲೆ ದಿವ್ಯಾಂಗ ರಕ್ಷಣಾ ಸಮಿತಿಯ ಸಂಚಾಲಕರು ಹಾಗೂ ಕೊಡವೂರು ನಗರ ಸಭಾ ಸದಸ್ಯರಾದ ಶ್ರೀ ವಿಜಯ ಕೊಡವೂರು, ಮಂಗಳೂರು ದ. ಕ. ಮತ್ತು ಉಡುಪಿ ಜಿಲ್ಲಾ ಅಂಗವಿಕಲರ ಸಂಘ (ರಿ.),ನ ಅಧ್ಯಕ್ಷರಾದ ಡಾ. ಮುರಳೀಧರ್ ನಾಯಕ್ ಉಪಸ್ಥಿತರಿದ್ದರು.


  ಕಾರ್ಯಕ್ರಮದಲ್ಲಿ ಮಂಗಳೂರು ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ ನ ಸ್ಥಾಪಕಾಧ್ಯಕ್ಷರಾದ ಶ್ರೀ ಅರ್ಜುನ್ ಭಂಡಾರ್ಕರ್ ಹಾಗೂ ಸೇವಾಭಾರತಿ ಸಲಹಾ ಮಂಡಳಿ ಸದಸ್ಯರಾದ ಡಾ.ಎ. ಜಯಕುಮಾರ್ ಶೆಟ್ಟಿ ಅವರನ್ನು ಗೌರವಿಸಲಾಯಿತು.

sewabharathikanyadi