ಸೆಪ್ಟೆಂಬರ್ ನಲ್ಲಿ ನಡೆದ ರಾಜ್ಯ ಮಟ್ಟ ರಿಹ್ಯಾಬ್ ಮೇಳದ ಮುಖ್ಯಾಂಶಗಳು

17.11.23 05:47 AM By sewabharathikanyadi

1.ರಾಜ್ಯ ಮಟ್ಟದ ರಿಹ್ಯಾಬ್ ಮೇಳದಲ್ಲಿ ಕರ್ನಾಟಕದ 28 ಜಿಲ್ಲೆಗಳಿಂದ 168 ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರು  ಅಲ್ಲದೆ ಇವರೊಂದಿಗೆ 80 ಮಂದಿ ಆರೈಕೆ ದಾರರು ಹಾಗೂ 30 ಮಂದಿ  ವೈದ್ಯ ಕೀಯ ಕ್ಷೇತ್ರದಿಂದ ಇಂಟರ್ನ್ ಗಳು ಭಾಗವಹಿಸುರುವುದು ಸಂತಸದ ವಿಷಯ.

2.  ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರಲ್ಲಿ 13 ಮಂದಿ ಮಹಿಳೆಯರು ಹಾಗೂ 155 ಮಂದಿ ಪುರುಷರು ಭಾಗವಹಿಸಿದ್ದರು.

3. ಆಗಮಿಸಿದಂತಹ ಎಲ್ಲಾ ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರಿಗೆ ರಿಜಿಸ್ಟ್ರೇಷನ್ ಕಿಟ್ ಗಳು ಹಾಗೂ ಬೆನ್ನುಹುರಿ ಅಪಘಾತ ಹಾಗೂ ಅದರ ದ್ವಿತೀಯಾಂತರ  ಸಮಸ್ಯೆಗಳ ಬಗ್ಗೆ ಕೈಪಿಡಿ ಪುಸ್ತಕ ನೀಡಲಾಯಿತು.

4. ಬೆನ್ನುಹುರಿ ಅಪಘಾತಕ್ಕೊಳಗಾದ 168 ಮಂದಿ ದಿವ್ಯಾಂಗರಿಗೆ ವೈದ್ಯರಿಂದ ತಪಾಸಣೆ ಹಾಗೂ ಸಲಹೆ ಪಡೆದುಕೊಂಡರು

5. ಬೆನ್ನುಹುರಿ ಅಪಘಾತಕ್ಕೊಳಗಾದ 120 ಮಂದಿ ದಿವ್ಯಾಂಗರಿಗೆ ರಕ್ತ ಮತ್ತು ಮೂತ್ರದ ಪರೀಕ್ಷೆ, 87 ಮಂದಿಗೆ ಯು ಎಸ್ ಜಿ ಸ್ಕ್ಯಾನಿಂಗ್ ನಡೆಸಲಾಗಿತ್ತು.

6. ಬೆನ್ನುಹುರಿ ಅಪಘಾತಕ್ಕೊಳಗಾದ 168 ಮಂದಿ ದಿವ್ಯಾಂಗರಿಗೆ ವಿವಿಧ ವಿಷಯಗಳ ಕುರಿತು ಜಾಗೃತಿ ಕಾರ್ಯಾಗಾರಗಳನ್ನು ನಡೆಸಲಾಗಿತ್ತು.

  a. ಬೆನ್ನುಹುರಿ ಅಪಘಾತ, ಪುನಶ್ಚೇತನದ ಅಗತ್ಯತೆಗಳು, ಅಡ್ವೋಕೇಸಿ, ಸರಕಾರದಿಂದ ದೊರಕುವ ಸೌಲಭ್ಯಗಳ ಕುರಿತು ಮಾಹಿತಿ ನೀಡಲಾಗಿತ್ತು

 b.ಮನೋರಂಜನಾ ಚಟುವಟಿಕೆ ಮತ್ತು , ಕಾರ್ಯಕ್ರಮಗಳು ಹಾಗೂ ಜೀವನೋಪಾಯ ಸೌಲಭ್ಯಗಳ  ಬಗ್ಗೆ ಕಲ್ಪನೆ ನೀಡುವಂತಹ  ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

7. ಸೆಪ್ಟೆಂಬರ್ 26 ರಂದು ಮಂಗಳೂರಿನಲ್ಲಿ ನಡೆದ ಗಾಲಿ ಕುರ್ಚಿ ರಾಲಿಯಲ್ಲಿ ಸುಮಾರು 130 ಮಂದಿ ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರು ಭಾಗವಹಿಸಿದ್ದರು

8. 3 ದಿನಗಳ ಕಾಲ ನಡೆದಂತಹ ರಾಜ್ಯ ಮಟ್ಟದ ರಿಹ್ಯಾಬ್ ಮೇಳದಲ್ಲಿ ಶ್ರೀ ದಿನೇಶ್ ಗುಂಡೂರಾವ್,ಕರ್ನಾಟಕ ಸರಕಾರದ ಆರೋಗ್ಯ ಸಚಿವರು, , ಪುತ್ತೂರು ಹಾಗೂ ಬೈಂದೂರು ವಿಧಾನ ಸಭಾ ಕ್ಷೇತ್ರದ ಶಾಸಕರು , ಇಬ್ಬರು ವಿಧಾನ ಪರಿಷತ್ ಸದಸ್ಯರು ಹಾಗೂ ಜಿಲ್ಲಾ ಅಂಗವಿಕಲರ ಕಲ್ಯಾಣ ಅಧಿಕಾರಿಗಳು ಭಾಗವಹಿಸಿ ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರಿಗೆ ಸೌಲಭ್ಯ ಒದಗಿಸುವಲ್ಲಿ ಬೆಂಬಲಿಸುವುದಾಗಿ ಧನಾತ್ಮಕವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

sewabharathikanyadi