ಸೌತಡ್ಕ (ಅ.18)): ಸೌತಡ್ಕ ಸೇವಾಧಾಮ ಪುನಶ್ಚೇತನ ಕೇಂದ್ರದಲ್ಲಿ ಸನಿವಾಸಿಗಳಿಗೆ ಮತ್ತು ಆರೈಕೆದಾರರಿಗೆ ಕಾರ್ಯಾಗಾರವನ್ನು ಅಕ್ಟೋಬರ್ 18 ರಂದು ನಡೆಸಲಾಯಿತು. ಕಾರ್ಯಕ್ರಮ ಸಂಯೋಜಕರಾದ ಆಶ್ರಿತ್ ಸಿ.ಪಿ. ಅವರು ಪುನಶ್ಚೇತನ ಕೇಂದ್ರದ ಅಗತ್ಯತೆಗಳು, ಜೀವನೋಪಾಯ ಸೌಲಭ್ಯಗಳು ಹಾಗೂ ಸರಕಾರದಿಂದ ದೊರೆಯುವ ಸೌಲಭ್ಯಗಳ ಕುರಿತುಸನಿವಾಸಿಗಳಿಗೆ ಮತ್ತು ಆರೈಕೆದಾರರಿಗೆ ಮಾಹಿತಿ ಇತ್ತರು
