ಸೌತಡ್ಕ (ಜು.29): ಸೇವಾಭಾರತಿ ಖಜಾಂಚಿ ಹಾಗೂ ಸೇವಾಧಾಮದ ಸಂಸ್ಥಾಪಕರಾದಂತಹ ಶ್ರೀ ಕೆ ವಿನಾಯಕ ರಾವ್ ಅವರ ಹುಟ್ಟು ಹಬ್ಬದ ಸಂಭ್ರಮಾಚರಣೆಯನ್ನು ಸೇವಾಧಾಮ ಪುನಶ್ಚೇತನ ಕೇಂದ್ರದಲ್ಲಿ ಜುಲೈ 29 ರಂದು ಆಚರಿಸಲಾಯಿತು. ಕಾರ್ಯಕ್ರಮವನ್ನು ದೀಪ ಪ್ರಜ್ವಲನೆ ಮುಖಾಂತರ ಪ್ರಾರಂಭಿಸಲಾಯಿತು. ಕಾರ್ಯಕ್ರಮದಲ್ಲಿ ಬೆಳ್ತಂಗಡಿ ರೋಟರಿ ಕ್ಲಬ್ ನ ಅಧ್ಯಕ್ಷರು ರೊ.ಅನಂತ ಭಟ್ ಮಚ್ಚಿಮಲೆ, ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನ ವ್ಯವಸ್ಥಾಪನ ಸಮಿತಿ ಅಧ್ಯಕ್ಷರು ಶ್ರೀ ಹರೀಶ್ ರಾವ್, ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನ ಸೇವಾ ಟ್ರಸ್ಟ್ ಅಧ್ಯಕ್ಷರು ಶ್ರೀ ಕೃಷ್ಣ ಭಟ್, ಸೇವಾಭಾರತಿಯ ಸಲಹಾ ಮಂಡಳಿ ಸದಸ್ಯರು ಡಾ. ಎ. ಜಯಕುಮಾರ್ ಶೆಟ್ಟಿ, ಅರುಣ್ ಕುಮಾರ್ ಉಜಿರೆ, ಸೇವಾಭಾರತಿ ಅಧ್ಯಕ್ಷರು ಶ್ರೀಮತಿ ಸ್ವರ್ಣಗೌರಿ, ಸೇವಾಭಾರತಿ ಕಾರ್ಯದರ್ಶಿ ಶ್ರೀ ಬಾಲಕೃಷ್ಣ ಆಗಮಿಸಿ ಶ್ರೀ ಕೆ ವಿನಾಯಕ ರಾವ್ ಹುಟ್ಟುಹಬ್ಬಕ್ಕೆ ಶುಭಹಾರೈಸಿದರು. ಕಾರ್ಯಕ್ರಮದಲ್ಲಿ ಬೆಳ್ತಂಗಡಿ ರೋಟರಿ ಕ್ಲಬ್ ನ ಸದಸ್ಯರು,ಸೇವಾಭಾರತಿಯ ಹಿತೈಷಿಗಳಾದ ಶ್ರೀಮತಿ ಶಾಂತ ಕುಮಾರಿ, ಶ್ರೀಮತಿ ಛಾಯಾ ಸಿ. ಎಸ್. ಉಜಿರೆ ಇ ಮ್ಯಾಕ್ಸ್ ಕಂಪ್ಯೂಟರ್ ನ ಬ್ರಾಂಚ್ ಹೆಡ್ ಶ್ರೀಮತಿ ಜ್ಯೋತಿ ಲಕ್ಷ್ಮಿ, ಶ್ರೀಮತಿ ಬೇಬಿ ಉಮೇಶ್, ಸೇವಾಭಾರತಿ ಸಿಬ್ಬಂದಿಗಳು ಹಾಗೂ ಸೇವಾಧಾಮದ ಸನಿವಾಸಿ ಮತ್ತು ಅವರ ಆರೈಕೆದಾರರು ಉಪಸ್ಥಿತರಿದ್ದರು.
ಬೆಳ್ತಂಗಡಿ ರೋಟರಿ ರೋಟರಿ ಕ್ಲಬ್ ತಂಡವು ಶ್ರೀ ಚಂದಪ್ಪ ಉಳ್ಳಾಲ ಇವರಿಗೆ ಗಾಲಿ ಕುರ್ಚಿಯನ್ನು ಹಸ್ತಾಂತರಿಸಿ, ಸೇವಾಭಾರತಿ ಕಾರ್ಯಾಚಟುವಟಿಕೆಗಳಿಗೆ ಧನಸಹಾಯ ನೀಡಿದರು. ಸೇವಾಭಾರತಿ ಖಜಾಂಚಿ ಹಾಗೂ ಸೇವಾಧಾಮದ ಸಂಸ್ಥಾಪಕರಾದಂತಹ ಶ್ರೀ ಕೆ ವಿನಾಯಕ ರಾವ್ ಅವರ ಹುಟ್ಟು ಹಬ್ಬದ ಸಂಭ್ರಮಾಚರಣೆಯ ಪ್ರಯುಕ್ತ ಬೆನ್ನುಹುರಿ ಅಪಘಾತಕ್ಕೊಳಗಾದ ಶ್ರೀ ಉಮೇಶ್ ಸುಳ್ಯ ಇವರಿಗೆ ವಾಟರ್ ಬೆಡ್ ಅನ್ನು ಹಸ್ತಾಂತರಿಸಿ, ಸೇವಾಧಾಮದ ಎಲ್ಲಾ ಸನಿವಾಸಿಗಳಿಗೆ ಕಿಟ್ ಹಾಗೂ ಬೆಡ್ ಶೀಟ್ ನೀಡಲಾಯಿತು. ಕಾರ್ಯಕ್ರಮದ ನಂತರ ಜೀ ವಾಹಿನಿ ಸರಿಗಮಪ ಹಾಗೂ ಡಾನ್ಸ್ ಕರ್ನಾಟಕ ಡಾನ್ಸ್ ಖ್ಯಾತಿಯ ಕು. ಕ್ಷಿತಿ ಕೆ. ರೈ ಧರ್ಮಸ್ಥಳ ಇವರಿಂದ ರಸಮಂಜರಿ ಕಾರ್ಯಕ್ರಮವನ್ನು ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಒಟ್ಟು 30 ಮಂದಿ ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಸೇವಾಭಾರತಿ ಡಾಕ್ಯುಮೆಂಟ್ಸ್ ಸಂಯೋಜಕಿ ಕು. ಅಪೂರ್ವ ಪಿ ವಿ ನಿರೂಪಿಸಿದರು. ಸೇವಾಧಾಮದ ಅಸಿಸ್ಟೆಂಟ್ ತೆರಪಿಸ್ಟ್ ಶ್ರೀಮತಿ ಪುಷ್ಪಲತಾ ಸ್ವಾಗತಿಸಿ, ಸೇವಾಭಾರತಿ ಮ್ಯಾನೇಜರ್ ಶ್ರೀ ಮೋಹನ್ ಎಸ್. ಧನ್ಯವಾದವಿತ್ತರು.
