ಸೇವಾಭಾರತಿಯಿಂದ ಸ್ಕೂಲ್ ಕಿಟ್ ವಿತರಣೆ

15.11.23 03:09 PM By sewabharathikanyadi

ಕನ್ಯಾಡಿ (ಜೂ.13) : ಸೇವಾಭಾರತಿ ಕನ್ಯಾಡಿ  ವತಿಯಿಂದ ಸಿದ್ದವನ  ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಶಾಲಾ  ಬ್ಯಾಗ್, ಛತ್ರಿ, ಪುಸ್ತಕ, ಮತ್ತಿತರ ಲೇಖನ ಸಾಮಗ್ರಿಗಳನ್ನು ಜೂನ್ 13ರಂದು ವಿತರಿಸಲಾಯಿತು. 

ಕಾರ್ಯಕ್ರಮದಲ್ಲಿ ಸೇವಾಭಾರತಿಯ ಅಧ್ಯಕ್ಷರಾದ  ಶ್ರೀಮತಿ ಸ್ವರ್ಣಗೌರಿ ಮಾತನಾಡಿ, ಸರಕಾರಿ ಶಾಲಾ ವಾತಾವರಣದ ಕಲಿಕೆಯಿಂದ ಮಕ್ಕಳಿಗೆ ದೊರೆಯುವ ಪ್ರಯೋಜನದ ಬಗ್ಗೆ ತಿಳಿಸಿ, ಸ್ಕೂಲ್ ಕಿಟ್ ವಿತರಿಸಿದರು. ಉಜಿರೆ ವಿಭಾಗದ ಸಮೂಹ ಸಂಪನ್ಮೂಲ ವ್ಯಕ್ತಿ  ಶ್ರೀಮತಿ ಪ್ರತಿಮಾ ಕೆ ಎಂ. ಸರಕಾರಿ ಶಾಲೆಯ ಪ್ರಾಮುಖ್ಯತೆಯನ್ನು  ತಿಳಿಸಿದರು. ಸಿದ್ದವನ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಮತಿ ಸುಜಾತ ರೈ, ಶಾಲೆಯ ಎಸ್. ಡಿ. ಎಂ. ಸಿ ಅಧ್ಯಕ್ಷರಾದ ಶ್ರೀ ವಿಶ್ವನಾಥ್, ಸೇವಾಭಾರತಿ ಸಂಸ್ಥೆಯ ಸ್ವಯಂ ಸೇವಕರಾದ ಶ್ರೀ ಚಂದನ್ ಗುಡಿಗಾರ್,  ಸೀನಿಯರ್ ಮ್ಯಾನೇಜರ್ ಚರಣ್ ಕುಮಾರ್ ಎಂ,ಡಾಕ್ಯುಮೆಂಟೇಷನ್ ಸಂಯೋಜಕಿ ಕು.ಅಪೂರ್ವ ಪಿ. ವಿ ಮತ್ತು ವಿದ್ಯಾರ್ಥಿಗಳ ಪೋಷಕರು  ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

 ಒಟ್ಟು 11 ಮಂದಿ ಶಾಲಾ ಮಕ್ಕಳಿಗೆ ಸ್ಕೂಲ್ ಕಿಟ್ ಗಳನ್ನು ವಿತರಿಸಲಾಯಿತು. ಕಾರ್ಯಕ್ರಮವನ್ನು ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಮತಿ ಸುಜಾತ ರೈ ನಿರೂಪಿಸಿ, ಸಹಶಿಕ್ಷಕಿ ಅಪರ್ಣ ವಂದಿಸಿದರು.

sewabharathikanyadi